ನವದೆಹಲಿ: ಮಹೀಂದ್ರಾ ಆ್ಯಂಡ್ ಮಹೀಂದ್ರಾ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ಕೇಶುಬ್ ಮಹೀಂದ್ರಾ (99ವರ್ಷ) ಅವರು ಬುಧವಾರ (ಎ.12) ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇಶುಬ್ ಅವರು 1963ರಿಂದ 2012ರವರೆಗೆ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಇದನ್ನೂ ಓದಿ:Earthquake: ಬಿಹಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಬೆಳ್ಳಂಬೆಳಗ್ಗೆ ಕಂಪಿಸಿದ ಭೂಮಿ
ಕೇಶುಬ್ ಮಹೀಂದ್ರಾ ಅವರ ನಿಧನ ಸುದ್ದಿಯನ್ನು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯ ಮಾಜಿ ಆಡಳಿತ ನಿರ್ದೇಶಕ ಪವನ್ ಗೋಯೆಂಕಾ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಖಚಿತಪಡಿಸಿದ್ದಾರೆ.
2023ರ ಭಾರತದ ಶ್ರೀಮಂತ ಬಿಲಿಯನೇರ್ ಗಳ ಪೋರ್ಬ್ಸ್ ಪಟ್ಟಿಯಲ್ಲಿ ಕೇಶುಬ್ ಮಹೀಂದ್ರ ಅವರ ಹೆಸರು ಪ್ರಕಟಗೊಂಡಿತ್ತು. “ಕೈಗಾರಿಕಾ ಇಂಡಸ್ಟ್ರಿ ಇಂದು ಬಹು ಪ್ರತಿಭಾವಂತ ವ್ಯಕ್ತಿಯೊಬ್ಬರನ್ನು ಕಳೆದುಕೊಂಡಿದೆ. ಶ್ರೀ ಕೇಶುಬ್ ಮಹೀಂದ್ರಾ ಅವರಿಗೆ ಸರಿಸಾಟಿಯಾದ ವ್ಯಕ್ತಿ ಇಲ್ಲ. ಅವರೊಬ್ಬ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ವ್ಯಕ್ತಿಯಾಗಿದ್ದರು. ಅವರ ವ್ಯವಹಾರ ಕೌಶಲ್ಯ ನನ್ನ ಮೇಲೆ ಪ್ರಭಾವ ಬೀರಿತ್ತು” ಎಂದು ಗೋಯೆಂಕಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
Related Articles
ಸುಮಾರು ಐದು ದಶಕಗಳ ಕಾಲ ಕೇಶುಬ್ ಮಹೀಂದ್ರಾ ಅವರು ಸಂಸ್ಥೆಯ ಚುಕ್ಕಾಣಿ ಹಿಡಿದಿದ್ದರು. 2012ರ ಆಗಸ್ಟ್ ನಲ್ಲಿ ಕೇಶುಬ್ ಅಧ್ಯಕ್ಷ ಸ್ಥಾನದಿಂದ ನಿವೃತ್ತಿಯಾಗಿ ಸೋದರಳಿಯ ಆನಂದ್ ಮಹೀಂದ್ರಾಗೆ ಅಧಿಕಾರವನ್ನು ಹಸ್ತಾಂತರಿಸಿದ್ದರು.