Advertisement
ಸರ್ಕಾರಿ, ಖಾಸಗಿ, ಹವ್ಯಾಸಿ ಎಲ್ಲರಿಗೂ ಇಲ್ಲಿ ತರಬೇತಿ ನೀಡಲಾಗುತ್ತದೆ. ಸಾವಯವ ಕೃಷಿಗೆ ಪೂರಕವಾಗುವಂತೆ ಸಾವಯವ ಗೊಬ್ಬರದ ಬಳಕೆ, ಕೀಟನಾಶಕಗಳ ಬಳಕೆ ಇಲ್ಲದೇನೆ ಕೇವಲ ಗೋಮೂತ್ರದಿಂದ ತಯಾರಾದ ಜೀವಾಮೃತ ಗಳ ಬಳಕೆ ಮೂಲಕ ಕೃಷಿಗೆ ಆದ್ಯತೆ ನೀಡುತ್ತಿರುವುದು ಇಲ್ಲಿನ ವಿಶೇಷತೆ. ಅಲ್ಲದೆ ನೀರಿನ ಸದ್ಬಳಕೆ, ನೀರಿನ ಸಂರಕ್ಷಣೆ, ಅಂತರ್ಜಲ ಹೆಚ್ಚಿಸಲು ತೆಗೆದುಕೊಂಡ ಕ್ರಮಗಳು ನಿಜಕ್ಕೂ ವಿಶೇಷವಾಗಿವೆ. ಅಲ್ಲದೆ ಕೇಶವ ಸೃಷ್ಟಿ ಗೋಶಾಲೆ ಇಂದು ವಿಶ್ವವಿದ್ಯಾಲಯದಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಸಚಿವರು ಬಣ್ಣಿಸಿದ್ದಾರೆ.
Related Articles
Advertisement
ಕೇಶವ ಸೃಷ್ಟಿ ಪರಿಸರದಲ್ಲಿ ಗ್ರಾಮವಿಕಾಸದ ಪರಿಕಲ್ಪನೆಗಳು, ಮಹಾರಾಷ್ಟ್ರಾದ 75 ಕ್ಕೂ ಹೆಚ್ವು ಗ್ರಾಮಗಳಲ್ಲಿ ಗ್ರಾಮವಿಕಾಸದ ಯೋಜನೆಗಳು ಜಾರಿಯಲ್ಲಿವೆ. ಔಷಧಿ ಗಿಡಮೂಲಿಕೆಗಳ ಉಪಯೋಗ ಮಾಡಿಕೊಂಡು ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ವಿಶೇಷ ಔಷಧಗಳಿಗೆ ಪೇಟೆಂಟ್ ಪಡೆದುಕೊಂಡು ಮಾರಾಟ ಸಹ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಸುಮಾರು 160 ಎಕರೆ ಪ್ರದೇಶದಲ್ಲಿ ಕೃಷಿ ಹಾಗೂ ಇವುಗಳಿಗೆ ಸಂಬಂಧಿಸಿದಂತೆ ಸಮಗ್ರವಾಗಿ ಕೃಷಿಯನ್ನು ಹಾಗೂ ಅವುಗಳನ್ನು ಬಳಸಿಕೊಂಡು ಸಮೃದ್ಧವಾದ ಗೋಶಾಲೆ ಮತ್ತು ಕೃಷಿ ನಡೆಸಬಹುದಾಗಿದೆ.ಕೇಶವ ಸೃಷ್ಟಿ ಗೋಶಾಲೆಯಲ್ಲಿ ಕೃಷಿ ಹಾಗೂ ಗೋಪಾಲನೆ ಗಳ ಬಗ್ಗೆ ತರಬೇತಿ ಸಹ ನೀಡಲಾಗುತ್ತದೆ. 600ಕ್ಕೂ ಹೆಚ್ಚು ಜನರು ತರಬೇತಿ ಹಾಗೂ ಬೇರೆ ಬೇರೆ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ನಮ್ಮ ರಾಜ್ಯದ ಗೋಶಾಲೆಗಲ್ಲಿ ಮಹಾರಾಷ್ಟ್ರ ಮಾದರಿ ಅಳವಡಿಸಿಕೊಂಡರೆ ಪ್ರತಿಯೊಬ್ಬ ರೈತ, ಪಶುಪಾಲಕರು ಹಾಗೂ ಜಾನುವಾರು ಸಾಕಣೆ ಮಾಡುವವರು ಆರ್ಥಿಕವಾಗಿ ಮತ್ತಷ್ಟು ಸಬಲರಾಗಬಲ್ಲರು-ಪ್ರಭು ಚವ್ಹಾಣ್