ಜೊಹಾನ್ಸ್‌ಬರ್ಗ್: ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ನೆದರ್ಲೆಂಡ್ಸ್ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಲಿದ್ದಾರೆ.
ಐಸಿಸಿ ವಿಶ್ವಕಪ್ ಸೂಪರ್ ಸೀರೀಸ್ ಅಂಗವಾಗಿ ನಡೆಯಲಿರುವ 3 ಪಂದ್ಯಗಳ ಸರಣಿ ನ.26ರಂದು ಆರಂಭವಾಗಲಿದೆ.
16 ಮಂದಿಯ ತಂಡವನ್ನು ಕ್ರಿಕೆಟ್ ದ.ಆಫ್ರಿಕಾ ಪ್ರಕಟಿಸಿದ್ದು, ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸಿದ್ದ ಬವುಮ, ಮಾಕ್ರìಮ್, ಡಿ ಕಾಕ್, ನೋರ್ಜೆ, ರಬಾಡ ಒಳಗೊಂಡಂತೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.
ಇದನ್ನೂ ಓದಿ:ಬೂಮ್ ಕಾರ್ಬೆಟ್ ಎಲೆಕ್ಟ್ರಿಕ್ ಸ್ಕೂಟರ್; ಐದು ವರ್ಷ ಇಎಂಐ ಸೌಲಭ್ಯ
ಆಲ್‌ರೌಂಡರ್ ವೇಯ್ನ ಪಾರ್ನೆಲ್ ಅವರನ್ನು 2017ರ ಬಳಿಕ ಮೊದಲ ಬಾರಿ ರಾಷ್ಟ್ರೀಯ ತಂಡಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ. ಜತೆಗೆ ಜುಬೇರ್ ಹಮ್ಜ ಮತ್ತು ರಿಯಾನ್ ರಿಕೆಲ್ಟನ್ ತಂಡಕ್ಕೆ ಆಯ್ಕೆಯಗಿರುವ ಹೊಸಬರು. ಹಮ್ಜ ಈ ಹಿಂದೆ ಟೆಸ್ಟ್ ತಂಡದಲ್ಲಿದ್ದರು.