Advertisement

ಕೋವಿಡ್ ಹಿನ್ನೆಲೆ : ಸಾಮೂಹಿಕ ಕೇಶ ಮುಂಡನೆ ಮಾಡಿ ಹರಕೆ ತೀರಿಸಿದ ಗ್ರಾಮಸ್ಥರು

09:40 PM Jan 01, 2022 | Team Udayavani |

ಭೋಪಾಲ್‌: ಕೊರೊನಾದಿಂದಾಗಿ ನಮ್ಮೂರಲ್ಲಿ ಒಂದೂ ಸಾವಾಗದಿರಲಿ ಎಂದು ಹರಕೆ ಹೊತ್ತಿದ್ದ ಗ್ರಾಮವೊಂದು ಶುಕ್ರವಾರ ಊರ ದೇವರಿಗೆ ವಿಶೇಷ ರೀತಿಯಲ್ಲಿ ಹರಕೆ ತೀರಿಸಿದೆ. ಊರಿನ 90ಕ್ಕೂ ಅಧಿಕ ಜನರು ಸಾಮೂಹಿಕವಾಗಿ ಕೇಶ ಮುಂಡನ ಮಾಡಿಸಿಕೊಂಡು ದೇವರಿಗೆ ಧನ್ಯವಾದ ಅರ್ಪಿಸಿದ್ದಾರೆ.

Advertisement

ಮಧ್ಯಪ್ರದೇಶದ ನೀಮುಂಚ್‌ ಜಿಲ್ಲೆಯ ದೇವ್ರಿ ಖಾವಸ ಗ್ರಾಮದಲ್ಲಿ ಇಂತಹ ವಿಶೇಷ ಆಚರಣೆ ನಡೆದಿದೆ. ಸುಮಾರು 2500 ಜನರಿರುವ ಈ ಗ್ರಾಮದಲ್ಲಿ 2021ರಲ್ಲಿ ಕೊರೊನಾ 2ನೇ ಅಲೆಯ ಸಮಯದಲ್ಲಿ 25-30 ಜನರಿಗೆ ಸೋಂಕು ದೃಢಪಟ್ಟಿತ್ತು. ಅದರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿತ್ತಂತೆ. ಆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮದ ದೇವನಾರಾಯಣ ದೇಗುಲದಲ್ಲಿ ಹರಕೆ ಹೊತ್ತಿದ್ದಾರೆ. “ನಮ್ಮೂರಲ್ಲಿ ಈ ವರ್ಷ ಸೋಂಕಿಗೆ ಒಂದೂ ಬಲಿಯಾಗದಿದ್ದರೆ, ಸಾಮೂಹಿಕವಾಗಿ ಕೇಶ ಮುಂಡನ ಮಾಡಿಸಿಕೊಳ್ಳುತ್ತೇವೆ’ ಎಂದು ಹೇಳಿಕೊಂಡಿದ್ದಾರೆ.

ಅವರ ಬಯಕೆಯಂತೆಯೇ 2021ರಲ್ಲಿ ಗ್ರಾಮದಲ್ಲಿ ಕೊರೊನಾಕ್ಕೆ ಒಂದೂ ಬಲಿಯಾಗಿಲ್ಲ. ಆ ಹಿನ್ನೆಲೆಯಲ್ಲಿ ವರ್ಷಾಂತ್ಯದ ದಿನವಾದ ಶುಕ್ರವಾರ ಊರಿನಲ್ಲಿ ಹಬ್ಬವನ್ನೇ ಆಚರಿಸಲಾಗಿದೆ. ಊರವರೆಲ್ಲ ಸಂಭ್ರಮದಿಂದ ದೇವರಿಗೆ ಪೂಜೆ ಸಲ್ಲಿಸಿದ್ದು, 90ಕ್ಕೂ ಅಧಿಕ ಮಂದಿ ಕೇಶ ಮುಂಡನ ಮಾಡಿಸಿಕೊಂಡಿದ್ದಾರೆ. ಮಹಿಳೆಯರು, ಮಕ್ಕಳೆಲ್ಲ ಸೇರಿ ಭಜನೆ, ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.

ಇದನ್ನೂ ಓದಿ : ತಿರುಮಲದ ಈ ಸೇವೆಗೆ 1.5 ಕೋಟಿ ರೂ.! ಇದು ಜಗತ್ತಿನಲ್ಲೇ ಅತ್ಯಂತ ದುಬಾರಿ ಸೇವೆ

Advertisement

Udayavani is now on Telegram. Click here to join our channel and stay updated with the latest news.

Next