Advertisement
ಕಾರ್ಕಳ ತಾಲೂಕಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕೆರ್ವಾಶೆ ಇದರ ಅಷ್ಟಬಂಧ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ನಿಮಿತ್ತ ಫೆ. 19 ರಂದು ಸಾಯನ್ ಪೂರ್ವದ ನಿತ್ಯಾನಂದ ಸಭಾಗೃಹದಲ್ಲಿ ಕೆರ್ವಾಶೆ ಗ್ರಾಮಸ್ಥರ ಸಮಿತಿ ಮುಂಬಯಿ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇವಸ್ಥಾನ ಜೀರ್ಣೋದ್ಧಾರ ಎಂಬ ಪುಣ್ಯ ಕಾರ್ಯದಲ್ಲಿ ಭಾಗಿಯಾಗುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಇದಕ್ಕೆ ಪೂರ್ವಜನ್ಮದ ಪುಣ್ಯದ ಫಲ ಬೇಕು. ಮುಂಬಯಿಯ ಭಕ್ತಾಭಿಮಾನಿಗಳು ಈ ದೇವತಾ ಕಾರ್ಯಕ್ರಮದಲ್ಲಿ ಸಕ್ರಿಯರಾಗಿ ಜೀವನವನ್ನು ಪಾವನವನ್ನಾಗಿಸಿಕೊಳ್ಳಬೇಕು. ನಮ್ಮ ಗಳಿಕೆಯ ಸ್ವಲ್ಪಾಂಶವನ್ನು ಇಂತಹ ಕಾರ್ಯಗಳಿಗೆ ವಿನಿಯೋಗಿಸಿಕೊಂಡಾಗ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಈ ಪುಣ್ಯ ಕಾರ್ಯದಲ್ಲಿ ಜಾತಿ, ಮತ, ಧರ್ಮವನ್ನು ಮರೆತು ಎಲ್ಲರೂ ಒಂದಾಗಿ ಭಾಗಿಯಾಗಬೇಕು ಎಂದರು.
Related Articles
Advertisement
ದೇವಸ್ಥಾನದ ಹಿರಿಯ ಅರ್ಚಕ ಕೆ. ಪದ್ಮನಾಭ ಭಟ್, ಸಂಜೀವ ರಾವ್, ಕುಲ್‌ದೀಪ್ ಸಿಂಗ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರ್ವಾಶೆ ಅಧ್ಯಕ್ಷ ಹರೀಶ್ ಕಾರ್ಣಿಕ್ ಮತ್ತಿತರರು ಉಪಸ್ಥಿತರಿದ್ದರು. ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಅವರು ದೀಪ ಬೆಳಗಿಸಿ ಸಭೆಗೆ ಚಾಲನೆಯಿತ್ತು ಆಶೀರ್ವಚನ ನೀಡಿದರು. ವಿಜಯ್ ಶೆಟ್ಟಿ ಮುಂಬಯಿ, ಕೆರ್ವಾಶೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಧರ್ಮರಾಜ ಹೆಗ್ಡೆ, ಸುನಿಲ್ ಶೆಟ್ಟಿ, ಪ್ರಭಾಕರ ನಾಯಕ್, ಸದಾನಂದ ಸಾಲ್ಯಾನ್, ಮಹೇಶ್ ಶೆಟ್ಟಿ ಅವರು ಪಾಲ್ಗೊಂಡಿದ್ದರು. ಸಭೆಯಲ್ಲಿ ಶಿರ್ಲಾಲು, ಮೂಂಡ್ಲಿ, ಮುಡಾರು, ಮಾಳ, ಐದು ಮಾಗಣೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದು ತಮ್ಮ ಸಲಹೆ – ಸೂಚನೆಗಳನ್ನಿತ್ತು ಸಭೆಯ ಯಶಸ್ಸಿಗೆ ಸಹಕರಿಸಿದರು. ಕೆರ್ವಾಶೆ ಗ್ರಾಮಸ್ಥರ ಸಮಿತಿ ಮುಂಬಯಿ ಪರವಾಗಿ ಸಾಂತಾಕ್ರೂಜ್ ಪೇಜಾವರ ಮಠದ ಪ್ರಬಂಧಕ ಕೆ. ಹರಿ ಭಟ್ ಅವರು ಆಯೋಜಿಸಿದ್ದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕೆರ್ವಾಶೆ ಇದರ ಅಧ್ಯಕ್ಷ ಹರೀಶ್ ಕಾರ್ನಿಕ್ ಸ್ವಾಗತಿಸಿದರು. ಸಂಜೀವ ದೇವಾಡಿಗ ಕೆರ್ವಾಶೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಮ್ಮ ಊರಿನ ಧಾರ್ಮಿಕ ಕ್ಷೇತ್ರಗಳನ್ನು ಉದ್ಧಾರಗೊಳಿಸುವ ಕರ್ತವ್ಯ ನಮ್ಮ ಮೇಲಿದೆ. ನಮ್ಮ ಊರು ಅನ್ನುವುದು ಶರೀರದಂತೆ. ಶರೀರ ಕ್ರಿಯಾತ್ಮಕವಾಗಿರಬೇಕಾದರೆ ಅದು ಜೀವಂತವಾಗಿರಬೇಕು. ಆದುದರಿಂದ ನಮ್ಮ ಊರಿನ ದೇವಸ್ಥಾನಗಳ ಸಂಪೂರ್ಣ ಜೀರ್ಣೋದ್ಧಾರದ ಅಗತ್ಯವಿದೆ. ಊರಿನ ದೇವಸ್ಥಾನ ಎಂದರೆ ಅದೊಂದು ಸಂಪರ್ಕ ಕೇಂದ್ರ. ಮನುಷ್ಯನಾದವನು ನಾಲ್ಕು ವರ್ಷ ಕಲಿತರು ಸಂಸ್ಕಾರಯುಕ್ತವಾದ ಕಲಿಕೆಯಾದರೆ ಅದೇ ಸರಿಯಾದ ಶಿಕ್ಷಣವಾಗುತ್ತದೆ. ಆದುದರಿಂದ ದೇವಸ್ಥಾನದ ಜೀರ್ಣೋದ್ಧಾರ ಎಂದರೆ ನಮ್ಮನ್ನು ನಾವೇ ಜೀರ್ಣೋದ್ಧಾರ ಗೊಳಿಸುವುದು ಎಂದು ಅರ್ಥ. ಈ ಪುಣ್ಯ ಕಾರ್ಯದಲ್ಲಿ ಎಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ
– ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ (ಸಂಸ್ಥಾಪಕ ಅಧ್ಯಕ್ಷರು : ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನ ಮುಂಬಯಿ). ಚಿತ್ರ-ವರದಿ : ರೊನಿಡಾ ಮುಂಬಯಿ