Advertisement

ಕೆರೂರ: ಅಪೂರ್ಣ ಕಾಮಗಾರಿಗೆ ತಪ್ಪದ ಅಪಘಾತ

04:14 PM Jan 29, 2024 | Team Udayavani |

ಉದಯವಾಣಿ ಸಮಾಚಾರ
ಕೆರೂರ: ಪಟ್ಟಣದಲ್ಲಿ ಹಾದು ಹೋದ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಅಪೂರ್ಣ ಕಾಮಗಾರಿಗೆ ಹೆದ್ದಾರಿಯಲ್ಲಿ
ಅಪಘಾತಗಳು ತಪ್ಪುತ್ತಿಲ್ಲ. ದಿನನಿತ್ಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸುತ್ತಿವೆ.

Advertisement

ಹೆದ್ದಾರಿಯ ಎಡ ಮತ್ತು ಬಲ ಬದಿಯ ಗೂಡಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುವ ಬಡ ವ್ಯಾಪಾರಗಳು ಮತ್ತು ರಸ್ತೆಯಲ್ಲಿ ಸಂಚರಿಸುವ ಜನರಿಗೆ ಯಾವ ಗಳಿಗೆಯಲ್ಲಿ ಯಾವ ಸ್ಥಳದಲ್ಲಿ ಅಪಘಾತ ಸಂಭವಿಸುತ್ತದೆ ಎಂಬ ಜೀವಭಯ ಕಾಡುತ್ತಿದೆ. ನಿತ್ಯ
ಆ ಭಯದಲ್ಲಿ ಕಾಲಕಳೆಯುತ್ತಿದ್ದಾರೆ.

60ಕ್ಕೂ ಅಧಿಕ ಅಪಘಾತಗಳು: ಹೆದ್ದಾರಿ ಕಾಮಗಾರಿ ಆರಂಭದಿಂದ ಈವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಅರವತ್ತಕೂ ಅಧಿಕ ಅಪಘಾತಗಳು ಸಂಭವಿಸಿವೆ. ಕೆಲವು ಅಪಘಾತಗಳಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದರೆ ಕೆಲವು ದೊಡ್ಡ ಅಪಘಾತಗಳಲ್ಲಿ ಜನರ ಜೀವ ಹಾರಿಹೋಗಿವೆ. ಹೆದ್ದಾರಿ ಮೇಲಿನ ಅಪಘಾತ ನೋಡಿ ಪಟ್ಟಣದ ಜನತೆಗೆ ಸಾಕಾಗಿ ಹೋಗಿದೆ.ಹೆದ್ದಾರಿ ಪ್ರಾ ಧಿಕಾರದ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕಳಪೆ ಕಾಮಗಾರಿ: ಪಟ್ಟಣದ ಎಡ ಮತ್ತು ಬಲ ಭಾಗದ ಬಳಿ ನಿರ್ಮಿಸಲಾದ ಚರಂಡಿ ಮತ್ತು ರಸ್ತೆ ಮಧ್ಯದ ಡಿವೈಡರ್‌ ಅಪಘಾತಗಳಿಗೆ ಸಂಪೂರ್ಣ ಹಾಳಾಗಿದೆ. ಹುಲ್ಮನಿ ಪೆಟ್ರೋಲ್‌ ಬಂಕ್‌ದಿಂದ ಬಾದಾಮಿ ಕ್ರಾಸ್‌ ವರೆಗಿನ ಡಾಂಬರೀಕರಣ ರಸ್ತೆ ಮಧ್ಯದಲ್ಲಿ ತಗ್ಗು ದಿನ್ನಿ ಉಬ್ಬು ರಸ್ತೆ ಅಪಾಯಕಾರಿ ರಸ್ತೆಯಾಗಿ ಮಾರ್ಪಟ್ಟಿದೆ.

ವಾಹನಗಳ ಸುಗಮ ಸಂಚಾರಕ್ಕೆ ಅವಕಾಶವಾಗದೆ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನಗಳಂತೂ ಹೆದ್ದಾರಿ ಮೇಲೆ ಸಂಚರಿಸುವುದೇ ದುಸ್ತರವಾಗಿದೆ. ಹ್ಯಾಂಡಲ್‌ ಬಿಗಿಯಾಗಿ ಹಿಡಿದರೂ ಸಹ ನಿಯಂತ್ರಣಕ್ಕೆ ಸಿಗದೆ ಬೈಕ್‌ಗಳು ನೆಲಕ್ಕೆ ಬೀಳುತ್ತಿವೆ.

Advertisement

ಹೆದ್ದಾರಿಗೆ ಕತ್ತಲು ಆವರಿಸಿದೆ: ಪಟ್ಟಣದಲ್ಲಿ ಹೆದ್ದಾರಿ ರಸ್ತೆ ಮಧ್ಯೆ ವಿದ್ಯುತ್‌ ದೀಪದ ಕಂಬಗಳು ಕಳಪೆಯಾಗಿದ್ದರಿಂದ ಅಪಘಾತದಲ್ಲಿ ಭಾಗವಶ ಕಂಬಗಳು ನೆಲಕ್ಕೆ ಉರುಳಿ ಹೆದ್ದಾರಿ ತುಂಬ ಕತ್ತಲೆ ಆವರಿಸಿದ್ದು ಅದರಿಂದಲೇ ರಾತ್ರಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ ಎಂಬ ಆರೋಪವೂ ಕೇಳಿಬಂದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ದೊರೆಯುತ್ತಿಲ್ಲ. ಅಪಘಾತಗಳು ಸಾಮಾನ್ಯವಾಗಿ ಹೋಗಿವೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಹಿತಾಸಕ್ತಿ ಕೊರತೆಯ ಇದಕ್ಕೆಲ್ಲ ಮೂಲ ಕಾರಣ.
*ರಾಚಪ್ಪ ಕುದರಿ, ನಾಗರಿಕ

ವಿದ್ಯುತ್‌ ಕಂಬಗಳು ಬಿದ್ದ ಬಗ್ಗೆ ಮತ್ತು ಹೆದ್ದಾರಿ ರಸ್ತೆ ಬಗ್ಗೆ ಹಲವಾರು ದೂರುಗಳು ಬಂದಿವೆ.ಕಾಮಗಾರಿ ಬಗ್ಗೆ ನಮ್ಮ
ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ.
*ಸತೀಶ್‌ ಡಿಸ್ಲೆ, ಹೆದ್ದಾರಿ ಪ್ರಾಧಿಕಾರದ
ಅಧಿಕಾರಿ ನರಗುಂದ

*ಶ್ರೀಧರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next