Advertisement

“ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ : ಕೇಂದ್ರಕ್ಕೆ ಸಚಿವರ ಪತ್ರ’

03:00 AM Mar 16, 2021 | Team Udayavani |

ಬೆಂಗಳೂರು: ನಾಡದೋಣಿ ಮೀನುಗಾರರ ಅನುಕೂಲಕ್ಕಾಗಿ 3,313 ಕಿ.ಲೀ. ಸೀಮೆಎಣ್ಣೆ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರ, ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಸಚಿವ ಅಂಗಾರ ಹೇಳಿದರು.

Advertisement

ಮೀನು ಗಾರರ ಅಭಿವೃದ್ಧಿಗೆ ನಿಗದಿತ ಕಾಲಮಿತಿಯಲ್ಲಿ ಯೋಜನೆ ಜಾರಿ ಕುರಿತು ಕಾಂಗ್ರೆಸ್‌ನ ಕೆ. ಹರೀಶ್‌ ಕುಮಾರ್‌ ಗಮನ ಸೆಳೆ ಯುವ ಸೂಚನೆಯಡಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿ, ದೋಣಿ ಮಾಲಕರಿಗೆ ಡೀಸೆಲ್‌ ಸಬ್ಸಿಡಿ ಬಿಡುಗಡೆ ಸಂಬಂಧ ಸಿಎಂ, ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತದೆ ಎಂದರು.

30 ಕೋ.ರೂ. ವೆಚ್ಚದಲ್ಲಿ ಮೀನು ಮಾರಾಟ ಘಟಕ ಮತ್ತು ಮತ್ಸ್ಯದರ್ಶಿನಿ ಆರಂಭಿಸಲಾಗುತ್ತದೆ. ತೋಟಬೆಂಗ್ರೆಯಲ್ಲಿ 337 ಲಕ್ಷ ರೂ. ವೆಚ್ಚದಲ್ಲಿ ನಾಡದೋಣಿ ಜೆಟ್ಟಿ ನಿರ್ಮಾಣವನ್ನು ಆರ್‌ಐಡಿಎಫ್ ಯೋಜನೆಯಡಿ ಆರಂಭಿಸಲಾಗುತ್ತದೆ. ಕುಳಾçಯಲ್ಲಿ 196.51 ಕೋ.ರೂ. ವೆಚ್ಚದಲ್ಲಿ ಸರ್ವಋತು ಬಂದರನ್ನು ನಿರ್ಮಿಸಲಾಗುತ್ತಿದ್ದು, ಟೆಂಡರ್‌ ಪ್ರಗತಿಯಲ್ಲಿದೆ ಎಂದರು.

2.90 ಲಕ್ಷ ರೂ. ಸಾಲ
ಮೀನುಗಾರರು ಮನೆ ಕಟ್ಟಿ ಕೊಳ್ಳಲು ಸಿಆರ್‌ಝಡ್‌ ನಿಯಮ ಸಡಿಲಿಸುವ ಬಗ್ಗೆ ಸಚಿವಾಲಯಗಳ ಜತೆ ಚರ್ಚಿಸಲಾಗುವುದು. ಮೀನುಗಾರರ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಮೀನು ಮಾರಾಟ ಮಹಾಮಂಡಳದಿಂದ ಸಾಲ ನೀಡಲಾಗು ತ್ತಿದೆ. ಪಿಎಂ ಮತ್ಸ್ಯಸಂಪದ ಯೋಜನೆಯಡಿ ಸೌಲಭ್ಯ ಒದಗಿಸಲಾಗುತ್ತಿದೆ. ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮೀನುಗಾರರಿಗೂ ವಿಸ್ತರಿಸಲಾಗಿದೆ. ಈವರೆಗೆ 368 ಫ‌ಲಾನುಭವಿಗಳಿಗೆ ಕಾರ್ಡ್‌ ವಿತರಿಸಲಾಗಿದ್ದು, 2.90 ಲಕ್ಷ ರೂ. ಸಾಲ ನೀಡಲಾಗಿದೆ. ಮೀನುಗಾರರ ಸಾಲಮನ್ನಾ ಸಹಿತ ಹಲವು ಕ್ರಮ ಕೈಗೊಂಡಿದ್ದೇವೆ ಎಂದರು.

ಶೇ. 10 ಮೀಸಲಾತಿ: ಶೀಘ್ರ ಆದೇಶ
ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶಿಕ್ಷಣ, ಉದ್ಯೋಗದಲ್ಲಿ ಶೇ. 10ರಷ್ಟು ಮೀಸಲಾತಿಯನ್ನು ರಾಜ್ಯದಲ್ಲೂ ಕಲ್ಪಿಸುವ ಸಂಬಂಧ ಅಧಿವೇಶನ ಮುಗಿಯುವುದರೊಳಗೆ ಆದೇಶ ಹೊರ ಡಿಸಲಾಗುವುದು ಎಂದು ಸಚಿವ ಬೊಮ್ಮಾಯಿ ಭರವಸೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next