Advertisement
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಕೇಂದ್ರವು ವೈವಿಧ್ಯಮಯ ದೇವಾಲಯಗಳ ತವರೂರು. ಪಟ್ಟಣದ ಪ್ರತಿ ಬೀದಿಯಲ್ಲೂ ,ಪ್ರತಿ ತಿರುವಿನಲ್ಲೂ,ಪ್ರತಿ ವೃತ್ತದಲ್ಲೂ ಯಾವುದಾದರೊಂದು ದೇವಾಲಯ ಗೋಚರಿಸುತ್ತದೆ. ಸಾಗರದ ಪ್ರಮುಖ ಆಕರ್ಷಣೀಯ ಮತ್ತು ಐತಿಹಾಸಿಕ ಮಹತ್ವದ ಗಣಪತಿ ಕೆರೆಯ ಕೋಡಿಯ ಬಳಿ ಇರುವ ಶ್ರೀಕೆರೆಕೋಡಿ ಆಂಜನೇಯ ಸ್ವಾಮಿ ದೇವಾಲಯ ಅತ್ಯಂತ ಪ್ರಸಿದ್ಧವಾಗಿದೆ.
Related Articles
ಮುಜರಾಯಿ ಇಲಾಖೆಗೆ ಸೇರಿದ ದೇವಾಲಯ ಇದಾಗಿದೆ. ಆಗಿನ ಸಮಿತಿಯ ಮುಖ್ಯಸ್ಥರಾದ ದಿವಂಗತ ಸುಮತೀಂದ್ರ ಆಚಾರ್‌ರ ಮಾರ್ಗದರ್ಶನದಲ್ಲಿ ದೇವಾಲಯದ ಅಭಿವೃದ್ಧಿ ಕಾರ್ಯಗಳು ಆರಂಭಗೊಂಡವು. ಭಕ್ತರ ಉದಾರ ಕೊಡುಗೆಯಿಂದ ದೇವಾಲಯದ ಮುಂಭಾಗದ ಮುಖ ಮಂಟಪ, ತೆರೆದಬಾವಿ, ಅರ್ಚಕರ ವಸತಿ ಇತ್ಯಾದಿಗಳು ನಡೆದಿವೆ.
Advertisement
ದೇವಾಲಯದ ದ್ವಾರ ದಕ್ಷಿ ಣಾಭಿಮುಖವಾಗಿದ್ದು ದೇವರ ಮೂರ್ತಿ ಪೂರ್ವಾಭಿಮುಖವಾಗಿದೆ. ಮಾಧ್ವ ಸಿದ್ಧಾಂತದ ಪ್ರಕಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ನಿತ್ಯ ಪೂಜೆ ನಡೆಸಲಾಗುತ್ತದೆ. ಪ್ರತಿ ಶನಿವಾರ ಬೆಣ್ಣೆ ಅಲಂಕಾರ, ಹೂವಿನ ಅಲಂಕಾರ ಉತ್ಸವ ಪೂಜೆ ನಡೆಯುತ್ತದೆ. ಪ್ರತಿ ವರ್ಷ ಮಾಧ್ವ ನವಮಿಯಂದು ವಿಶೇಷ ಉತ್ಸವ , ಪಲ್ಲಕ್ಕಿ ಉತ್ಸವ ಮಹಾ ಪೂಜೆ ನಡೆಸಲಾಗುತ್ತದೆ.ಕಾರ್ತಿಕ ಅಮಾವಾಸ್ಯೆಯಂದು ಭಕ್ತರೋರ್ವರ ಪ್ರಾಯೋಜಕತ್ವದಲ್ಲಿ ಮುಖ ಮಂಟಪದಿಂದ ಗರ್ಭ ಗುಡಿಯ ವರೆಗೆ ಹೂವಿನ ಅಲಂಕಾರ, ಭಕ್ತರಿಂದ ಲಕ್ಷ ದೀಪೋತ್ಸವ ನಡೆಯುತ್ತದೆ. ಪ್ರತಿ ವರ್ಷ ವೈಶಾಖ ಅಮಾವಾಸ್ಯೆಯಂದು ಶನೈಶ್ಚರ ಜಯಂತಿಯೂ ವೈಭವದಿಂದ ನಡೆಯುತ್ತದೆ. ಸಾವಿರಾರು ಭಕ್ತರು ಆಗಮಿಸಿ ಎಳ್ಳಿನ ಬತ್ತಿ ದೀಪದ ಸೇವೆ ನಡೆಸುತ್ತಾರೆ. ಚೈತ್ರ ಪೂರ್ಣಿಮೆಯಂದು ಅರ್ಚಕರು ತಮ್ಮ ವೈಯಕ್ತಿಕ ಹರಕೆಯಾಗಿ ಉತ್ಸವ ಪೂಜೆ ಮತ್ತು ಸಮಾಜ ಬಾಂಧವರಿಗೆ ಅನ್ನ ಸಂತರ್ಪಣೆ ನಡೆಸುತ್ತಾರೆ.
ಬಾಲಗ್ರಹ ಪೀಡೆ ನಿವಾರಣೆ, ಭೂತ ಪ್ರೇತಾದಿ ಪೀಡೆ ನಿವಾರಣೆ, ವಿದ್ಯೆ , ಉದ್ಯೋಗ, ಸಂತಾನ ಪ್ರಾಪ್ತಿ, ಮಾನಸಿಕ ಕ್ಲೇಷ ನಿವಾರಣೆ, ಕುಟುಂಬ ಶಾಂತಿ ಇತ್ಯಾದಿಗಳಿಗೆ ಭಕ್ತರು ಇಲ್ಲಿಗೆ ಆಗುಸಿ ಅರ್ಚಕರಿಂದ ತಾುತ ಪಡೆದು ದೇವರಿಗೆ ಹರಕೆ ಹೊತ್ತು ಸಾಗಿ ಉತ್ತಮ ಫಲ ಪಡೆಯುತ್ತಿದ್ದಾರೆ. ಕೃ ಬೆಳೆಗಳಿಗೆ ಮಂಗಗಳ ಹಾವಳಿುಂದ ಮುಕ್ತಿ ದೊರಕಿಸಲು ಜೋಡು ತೆಂಗಿನ ಕಾಯಿ ಹರಕೆ ಹೊತ್ತು ಕೇಸರಿ ಪತಾಕೆ ಪಡೆದು ಜುàನಿನಲ್ಲಿ ಪತಾಕೆ ಸ್ಥಾಪಿಸಿ ಯಶಸ್ವಿಯಾಗುತ್ತಿದ್ದಾರೆ.
ಎನ್.ಡಿ.ಹೆಗಡೆ ಆನಂದಪುರಂ