Advertisement

Kerebete; ಸಾಂಪ್ರದಾಯಿಕ ಶೈಲಿಯಲ್ಲಿ ‘ಕೆರೆಬೇಟೆ’ ಟ್ರೇಲರ್‌ ರಿಲೀಸ್

03:03 PM Feb 22, 2024 | Team Udayavani |

ಈಗಾಗಲೇ ತನ್ನ ಟೈಟಲ್‌, ಫ‌ಸ್ಟ್‌ಲುಕ್‌ ಮತ್ತು ಹಾಡುಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ “ಕೆರೆಬೇಟೆ’ ಸಿನಿಮಾದ ಟ್ರೇಲರ್‌ ಫೆ. 23 ರ ಶುಕ್ರವಾರ ಬೆಳಿಗ್ಗೆ ಬಿಡುಗಡೆಯಾಗುತ್ತಿದೆ.

Advertisement

ಪಕ್ಕಾ ಮಲೆನಾಡಿನ ಸಂಸ್ಕೃತಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ತೆರೆಗೆ ಬರುತ್ತಿರುವ “ಕೆರೆಬೇಟೆ’ ಸಿನಿಮಾದ ಟ್ರೇಲರ್‌ ಅನ್ನು ಕೂಡ ಪಕ್ಕಾ ಮಲೆನಾಡಿನ ಸಾಂಪ್ರದಾಯಿಕ ಶೈಲಿಯಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಅದರಂತೆ ದೀಪಾವಳಿ ಹಬ್ಬದಲ್ಲಿ ಮಲೆನಾಡು ಭಾಗದಲ್ಲಿ ಜನಪ್ರಿಯ ವಾಗಿರುವ “ಅಂಟಿಗೆ-ಪಿಂಟಿಗೆ’ ಕಾರ್ಯಕ್ರಮದಂತೆ, ಚಿತ್ರತಂಡ ದೀಪ (ಜ್ಯೋತಿ) ಹಿಡಿದು, ಪದಗಳನ್ನು ಹಾಡುತ್ತಾ, ಬೆಂಗಳೂರು ಮತ್ತು ರಾಜ್ಯದ ವಿವಿಧ ಬಡಾವಣೆಗಳಲ್ಲಿ ಹಲವು ಮನೆಗಳು, ಅಂಗಡಿ ಮುಂಗಟ್ಟುಗಳ ಬಳಿ ತೆರಳಲಿದೆ. ಬಳಿಕ ದೀಪಕ್ಕೆ (ಪಂಜಿಗೆ) ಎಣ್ಣೆ ಎರೆದು, ಎಲ್ಲೆಡೆ ಜ್ಯೋತಿ ಬೆಳಗುವ ಮೂಲಕ, ಪುಟ್ಟ ಮಗುವಿನ ಕೈಯಲ್ಲಿ ವಿನೂತನವಾಗಿ “ಕೆರೆಬೇಟೆ’ ಟ್ರೇಲರ್‌ ಅನಾವರಣ ಮಾಡಲಿದೆ.

ಇನ್ನು ಈ ವಿನೂತನ ರೀತಿಯ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ಕಲಾವಿದರು, ತಂತ್ರಜ್ಞರು ಚಿತ್ರರಂಗದ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next