Advertisement

ವಿದ್ಯುತ್‌ ದರ ಪರಿಷ್ಕರಣೆ ಪ್ರಸ್ತಾವ 19ರಿಂದ ಕೆಇಆರ್‌ಸಿ ವಿಚಾರಣೆ

11:05 AM Feb 03, 2018 | |

ಬೆಂಗಳೂರು: ಎಸ್ಕಾಂಗಳು ಪ್ರತಿ ಯೂನಿಟ್‌ಗೆ ಗರಿಷ್ಠ 1.65 ರೂ.ವರೆಗೆ ನಾನಾ ಹಂತದ ವಿದ್ಯುತ್‌ ದರ ಏರಿಸುವ ಸಂಬಂಧ ಸಲ್ಲಿಸಿರುವ ಪ್ರಸ್ತಾವಗಳ ಕುರಿತು ಫೆ.19ರಿಂದ ವಿಚಾರಣೆ ಆರಂಭವಾಗಲಿದೆ. ಬೆಸ್ಕಾಂ, ಕೆಪಿಟಿಸಿಎಲ್‌ ಪ್ರಸ್ತಾವ ಕುರಿತಂತೆ  ಬೆಂಗಳೂರಿನಲ್ಲಿ ವಿಚಾರಣೆ ನಡೆಯಲಿದೆ. ನಂತರ ಆಯಾ ಎಸ್ಕಾಂ ವ್ಯಾಪ್ತಿಯಲ್ಲೇ ವಿಚಾರಣೆ ನಡೆಸಲಾಗುವುದು. ಮಾ. 9ಕ್ಕೆ ಕಲಬುರಗಿಯಲ್ಲಿ ಜೆಸ್ಕಾಂ ದರ ಪರಿಷ್ಕರಣೆ ಪ್ರಸ್ತಾವ ಕುರಿತಂತೆ ವಿಚಾರಣೆ ನಡೆಯಲಿದೆ ಎಂದು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡ ತಿಳಿಸಿದ್ದಾರೆ. 

Advertisement

ವಸಂತನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಕೆಇಆರ್‌ಸಿ ಕಚೇರಿ ಉದ್ಘಾಟನೆ ಬಳಿಕ ಪ್ರತಿಕ್ರಿಯಿಸಿದ ಅವರು, ದರ ಹೆಚ್ಚಳಕ್ಕೆ ಸಲ್ಲಿಸಿರುವ ಪ್ರಸ್ತಾವಕ್ಕೆ ಎಸ್ಕಾಂಗಳು ನೀಡುವ ಸಮರ್ಥನೀಯ ಅಂಶಗಳು, ಸಾರ್ವಜನಿಕರ ಅಭಿಪ್ರಾಯದ ಆಧಾರದ ಮೇಲೆ ಆಯೋಗ ತೀರ್ಮಾನ ಕೈಗೊಳ್ಳಲಿದೆ ಎಂದರು.

ಏನಿತ್ತು ಪ್ರಸ್ತಾವನೆ?
ಬೆಸ್ಕಾಂ ಪ್ರತಿ ಯೂನಿಟ್‌ಗೆ 1.45 ರೂ., ಸೆಸ್ಕ್ 1.65 ರೂ., ಮೆಸ್ಕಾಂ 1.08 ರೂ.,  ಜೆಸ್ಕಾಂ 1.36 ರೂ. ಹಾಗೂ ಹೆಸ್ಕಾಂ
1.23 ರೂ. ದರ ಹೆಚ್ಚಳಕ್ಕೆ ಕಳೆದ ವರ್ಷ ನವೆಂಬರ್‌ ನಲ್ಲಿ ಪ್ರಸ್ತಾವ ಸಲ್ಲಿಸಿವೆ. ಪ್ರತಿ ವರ್ಷದಂತೆ ಈ ಬಾರಿಯು ಎಲ್ಲ
ಎಸ್ಕಾಂಗಳು ದರ ಪರಿಷ್ಕರಣೆಗೆ ಪ್ರಸ್ತಾವ ಸಲ್ಲಿಸಿವೆ. ಜತೆಗೆ ಸಾರ್ವಜನಿಕ ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು ಎಂದು ಎಂ.ಕೆ.
ಶಂಕರಲಿಂಗೇಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next