ತಿರುವನಂತಪುರಂ:ಕೋವಿಡ್ ಸೋಂಕಿನ ಆತಂಕದ ನಡುವೆಯೂ ಮುಂಜಾಗ್ರತಾ ಕ್ರಮದೊಂದಿಗೆ ಉತ್ರಂ ಹಬ್ಬದ ಹಿನ್ನೆಲೆಯಲ್ಲಿ ಕೇರಳದ ಶಬರಿಮಲೆ ದೇವಾಲಯದ ಬಾಗಿಲು ಶುಕ್ರವಾರ(ಮಾರ್ಚ್ 18) ತೆರೆಯಲಾಗಿದೆ.
ಇದನ್ನೂ ಓದಿ:ಸುನಾಮಿಯಲ್ಲಿ ಕಣ್ಮರೆಯಾಗಿದ್ದ ಪೊಲೀಸ್ ಅಧಿಕಾರಿ 17 ವರ್ಷಗಳ ನಂತರ ಪತ್ತೆ
ಮಾರ್ಚ್ 28ರವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಕಡ್ಡಾಯವಾಗಿ ಕೋವಿಡ್ 19 ನೆಗೆಟಿವ್ ಸರ್ಟಿಫಿಕೇಟ್ ಅನ್ನು ಹೊಂದಿರಬೇಕೆಂದು ವರದಿ ತಿಳಿಸಿದೆ.
ಶಬರಿಮಲೆ ದೇಗುಲದ ಬಾಗಿಲು ತೆರೆಯುವ ಮೂಲಕ ಮತ್ತೆ ಮಹಿಳಾ ಭಕ್ತರ ಪ್ರವೇಶದ ವಿಚಾರವೂ ಕೇರಳದಲ್ಲಿ ಮುನ್ನಲೆಗೆ ಬಂದಂದಾಗಿದೆ, ಈಗಾಗಲೇ ಕೇರಳ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಬಿಜೆಪಿ ನೇತೃತ್ವದ ಎನ್ ಡಿಎ ಪ್ರಮುಖ ವಿಷಯವನ್ನಾಗಿ ಬಳಸಿಕೊಂಡಿವೆ ಎಂದು ವರದಿ ಹೇಳಿದೆ.
ಶಬರಿಮಲೆ ದೇವಸ್ಥಾನದೊಳಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಬಾರಿ ಸುಪ್ರೀಂಕೋರ್ಟ್ ನಿಂದ ಅಂತಿಮ ತೀರ್ಪು ಹೊರಬಿದ್ದ ನಂತರ ಎಲ್ಲಾ ಧಾರ್ಮಿಕ ಮುಖಂಡರ ಜತೆ ಚರ್ಚಿಸಿ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ(ಮಾರ್ಚ್ 18) ತಿಳಿಸಿದ್ದರು.
ಒಂದು ವೇಳೆ ಶಬರಿಮಲೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಗೆ ಹೊಸ ಅಫಿಡವಿತ್ ಅನ್ನು ಸಲ್ಲಿಸಿದೆಯೇ ಎಂಬ ವಿಚಾರವನ್ನು ಎಲ್ ಡಿಎಫ್ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಒತ್ತಡ ಹೇರುತ್ತಿವೆ.
ಶಬರಿಮಲೆಯಲ್ಲಿನ ಸಂಪ್ರದಾಯವನ್ನು ಎಡರಂಗದ ಸರ್ಕಾರ ಉದ್ದೇಶಪೂರ್ವಕವಾಗಿಯೇ ಉಲ್ಲಂಘಿಸಲು ಪ್ರಯತ್ನಿಸುತ್ತಿದ್ದು, ಸಾಮಾಜಿಕ ಕಾರ್ಯಕರ್ತರನ್ನು ಕ್ಷೇತ್ರಕ್ಕೆ ಕಳುಹಿಸುತ್ತಿದೆ. ಇದಕ್ಕೆ ಭಕ್ತರು ತಕ್ಕ ಪಾಠ ಕಲಿಸಬೇಕಿದ್ದು, ಚುನಾವಣೆಯಲ್ಲಿ ಕಡಕಂಪಲ್ಲಿ ಸುರೇಂದ್ರನ್ ಅವರನ್ನು ಸೋಲಿಸಬೇಕು ಎಂದು ಬಿಜೆಪಿ ತಿಳಿಸಿದೆ.