Advertisement

ಯಕೃತ್‌ ಕ್ಯಾನ್ಸರ್‌ಗೆ ಗಣಿಕೆ ಸೊಪ್ಪು ರಾಮಬಾಣ!

05:15 PM Nov 06, 2021 | Team Udayavani |

ತಿರುವನಂತಪುರ: ಯಕೃತ್‌ ಕ್ಯಾನ್ಸರ್‌ ಚಿಕಿತ್ಸೆಗೆ ನಮ್ಮ ನಿಮ್ಮ ಹಿತ್ತಿಲಲ್ಲೇ ಸಿಗುವ “ಕಾಶಿ ಸೊಪ್ಪು'(ಗಣಿಕೆ ಸೊಪ್ಪು) ರಾಮಬಾಣ ಎಂಬ ಮಹತ್ವದ ಸಂಶೋಧನೆಯೊಂ ದನ್ನು ಇಲ್ಲಿನ ರಾಜೀವ್‌ ಗಾಂಧಿ ಸೆಂಟರ್‌ ಫಾರ್‌ ಬಯೋಟೆಕ್ನಾಲಜಿ(ಆರ್‌ಜಿಸಿಬಿ)ಯ ಇಬ್ಬರು ವಿಜ್ಞಾನಿಗಳು ಮಾಡಿದ್ದಾರೆ.

Advertisement

ಮನಾಥಕ್ಕಾಲಿ ಎಂದೂ ಕರೆಯಲ್ಪಡುವ ಈ ಗಣಿಕೆ ಸೊಪ್ಪಿನ ಎಲೆಗಳಿಂದ ಹೊರತೆಗೆದ ಸಂಯುಕ್ತವು ಕ್ಯಾನ್ಸರ್‌ ಚಿಕಿತ್ಸೆಗೆ ಪರಿಣಾಮಕಾರಿ ಎಂಬುದನ್ನು ಕಂಡುಕೊಳ್ಳಲಾಗಿದೆ. ಮಾನವನ ಯಕೃತ್‌ನಲ್ಲಿ ಕ್ಯಾನ್ಸರ್‌ ಕೋಶಗಳು ಅನಿಯಂತ್ರಿತವಾಗಿ ಬೆಳೆಯುವುದನ್ನು ತಪ್ಪಿಸುವಲ್ಲಿ ಗಣಿಕೆ ಸೊಪ್ಪಿನ ಎಲೆಗಳು ಪ್ರಮುಖ ಪಾತ್ರ ವಹಿಸುತ್ತವೆ.

ಈ ಎಲೆಗಳಲ್ಲಿನ ಯುಟ್ರೋಸೈಡ್‌-ಬಿ ಎಂಬ ಕಣವನ್ನು ಪ್ರತ್ಯೇಕಿಸಿ, ಪರೀಕ್ಷಿಸಿದಾಗ ಯಕೃತ್ತಿನ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಇದನ್ನು ಬಳಸಬಹುದು ಎಂಬುದನ್ನು ಕಂಡುಕೊಳ್ಳಲಾಯಿತು ಎಂದು ಆರ್‌ಜಿಸಿಬಿ ಹಿರಿಯ ವಿಜ್ಞಾನಿ ರೂಬಿ ಜಾನ್‌ ಆ್ಯಂಟೋ ಮತ್ತು ಅವರ ವಿದ್ಯಾರ್ಥಿ ಡಾ| ಲಕ್ಷ್ಮೀ ಆರ್‌.ನಾಥ್‌ ಹೇಳಿದ್ದಾರೆ.

ಇವರು ಅಭಿವೃದ್ಧಿಪಡಿಸಿರುವ ಸಂಯುಕ್ತಕ್ಕೆ ಅಮೆರಿಕದ ಆಹಾರ ಮತ್ತು ಔಷಧ ಮಹಾನಿರ್ದೇಶನಾಲಯವು “ಆರ್ಫನ್‌ ಡ್ರಗ್‌'(ವಾಣಿಜ್ಯಿಕವಾಗಿ ಅಭಿವೃದ್ಧಿಪಡಿಸದ ಔಷಧ) ಎಂಬ ಸ್ಥಾನಮಾನ ನೀಡಿದೆ. ಅಲ್ಲದೆ ಯುಎಸ್‌ಎ, ಕೆನಡಾ, ಜಪಾನ್‌ ಮತ್ತು ದಕ್ಷಿಣ ಕೊರಿಯಾದಲ್ಲಿ ಈ ಔಷಧಕ್ಕೆ ಪೇಟೆಂಟ್‌ ಕೂಡ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next