Advertisement

ವಿದ್ಯಾರ್ಥಿನಿಯರಿಗೆ ಮಾತೃತ್ವದ ರಜೆ; ಕೇರಳದಲ್ಲಿ ಇದೇ ಮೊದಲ ಬಾರಿಗೆ ಇಂಥ ಕ್ರಮ

08:19 PM Dec 24, 2022 | Team Udayavani |

ಕೊಟ್ಟಾಯಂ:ಕೇರಳದ ಕೊಟ್ಟಾಯಂನಲ್ಲಿ ಇರುವ ಮಹಾತ್ಮಾ ಗಾಂಧಿ ವಿಶ್ವವಿದ್ಯಾನಿಲಯ 19 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನಗಳ ಹೆರಿಗೆ ರಜೆ ನೀಡಲು ನಿರ್ಧರಿಸಿದೆ. ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಈ ನಿಯಮ ಅನ್ವಯವಾಗಲಿದೆ.

Advertisement

ವಿದ್ಯಾರ್ಥಿನಿಯರು ಅರ್ಧಕ್ಕೇ ವ್ಯಾಸಂಗವನ್ನು ಮೊಟಕುಗೊಳಿಸುವುದನ್ನು ತಪ್ಪಿಸುವ ಉದ್ದೇಶದಿಂದ ಇಂಥ ಕ್ರಮ ಕೈಗೊಳ್ಳಲಾಗಿದೆ.

ಸಹ ಕುಲಪತಿ ಸಿ.ಟಿ. ಅರವಿಂದ ಕುಮಾರ್‌ ನೇತೃತ್ವದಲ್ಲಿ ಶುಕ್ರವಾರ ನಡೆದ ಸಿಂಡಿಕೇಟ್‌ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಹೆರಿಗೆಯ ಮೊದಲು ಅಥವಾ ನಂತರ- ಹೀಗೆ ಎರಡು ಆಯ್ಕೆಯಲ್ಲಿ ಒಂದನ್ನು ಬಳಕೆ ಮಾಡಿಕೊಂಡು ರಜೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮೊದಲ ಅಥವಾ ಎರಡನೇ ಹೆರಿಗೆಗೆ ಮಾತ್ರ ರಜೆ ನೀಡುವ ಬಗ್ಗೆಯೂ ತೀರ್ಮಾನಿಸಲಾಗಿದೆ.

ಒಂದು ವೇಳೆ, ಗರ್ಭಪಾತವಾದರೆ, ಟ್ಯುಬೆಕ್ಟಮಿ ಮಾಡಿಸಿಕೊಂಡರೆ ಕೂಡ 14 ದಿನ ರಜೆ ನೀಡಲು ಸಭೆ ನಿರ್ಧರಿಸಿದೆ. ಮೂಲಗಳ ಪ್ರಕಾರ ಇಂಥ ಕ್ರಮ ದೇಶದಲ್ಲಿಯೇ ಮೊದಲ ಬಾರಿಗೆ ಎಂದು ಹೇಳಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next