Advertisement

ತನ್ನನ್ನು ಚುಡಾಯಿಸಿದ ಮಗನನ್ನು ಕೊಂದು ಸುಟ್ಟ ತಾಯಿ

12:01 PM Jan 19, 2018 | Team Udayavani |

ತಿರುವನಂತಪುರ : 14ರ ಹರೆಯದ ತನ್ನ ಮಗನೇ ತನ್ನನ್ನು ಚುಡಾಯಿಸಿದ್ದಕ್ಕೆ ಕೋಪೋದ್ರಿಕ್ತಳಾದ 45ರ ಹರೆಯದ ತಾಯಿ, ಮಗನನ್ನು ಕುತ್ತಿಗೆ ಬಿಗಿದು ಕೊಂದು ಸುಟ್ಟು ಹಾಕಿದ ಘಟನೆ ವರದಿಯಾಗಿದೆ.

Advertisement

ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಕೇರಳದ ಕೊಲ್ಲಂನಲ್ಲಿ ಈ ಘಟನೆ ನಡೆದಿದೆ. ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿ ಹತ್ಯೆಗೀಡಾದವನನ್ನು ಜಿತು ಜಾಬ್‌ ಎಂದು ಗುರುತಿಸಲಾಗಿದೆ. 

ಬಾಳೆ ತೋಟದಲ್ಲಿ ತುಂಡರಿಸಲ್ಪಟ್ಟು ಅರೆ ಸುಟ್ಟ ಜಿತು ವಿನ ದೇಹವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆತನ ತಾಯಿ ಜಯಮೋಳ್‌ ಮನೋ ವೈಕಲ್ಯದಿಂದ ಬಳಲುತ್ತಿದ್ದಳು ಎಂದು ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next