Advertisement

ಕಾಡಾನೆ ಬಾಯಿಗೆ ಪಟಾಕಿ ಇಟ್ಟು ಸ್ಫೋಟಿಸಿದ ಅಮಾನವೀಯ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ?

05:29 PM Jun 04, 2020 | Mithun PG |

ಮಣಿಪಾಲ: ಆಹಾರವನ್ನು ಅರಸುತ್ತಾ ನಾಡಿಗೆ ಬಂದ ಕಾಡಾನೆಗೆ ಕಿಡಿಗೇಡಿಗಳು ಅನನಾಸಿನಲ್ಲಿ ಪಟಾಕಿ ಇಟ್ಟು ಕೊಟ್ಟಿದ್ದರು.  ಏನೂ ಅರಿಯದ ಆನೆ ಅದನ್ನು ಜಗಿದಿದ್ದು, ಪಟಾಕಿ ಸ್ಫೋಟಿಸಿದೆ. ಇದರಿಂದ ಆನೆಯ ಇಡೀ ಬಾಯಿಗೆ ಹಾನಿಯಾಗಿದ್ದು, ನೋವಿನಿಂದ ನರಳಿ  ಆ ಬಳಿಕ ಕೊನೆಯುಸಿರೆಳೆದಿದೆ. ಈ ಘಟನೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಉದಯವಾಣಿ ಕೂಡ ಈ ಅಮಾನವೀಯ ಘಟನೆಯ ಬಗ್ಗೆ ಜನರ  ಅಭಿಪ್ರಾಯ ಕೇಳಿದ್ದು. ಆಯ್ದ  ಅನಿಸಿಕೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

Advertisement

ಬಸವರಾಜ್ ಗೌಡ ಡಿ.ಡಿ:  ಸರ್ಕಾರ ಮತ್ತು ಅರಣ್ಯ ಅಧಿಕಾರಿಗಳು ಕಾಡು ಪ್ರಾಣಿಗಳಿಗೆ ಆಹಾರ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಅವುಗಳನ್ನು ಕಾಡಿನಿಂದ ನಾಡಿಗೆ ಬರದಂತೆ ಮಾಡಿ ಅವುಗಳಿಗೆ ಅಲ್ಲೆ ಆಹಾರ ವ್ಯವಸ್ತೆ ಮಾಡಬೇಕು. ಇತ್ತಿಚಿನ ದಿನಗಳಲ್ಲಿ ರೈತರು ಮೇಕೆ, ಕುರಿ, ಸಾಕಾಣಿಕೆ  ಮಾಡಿದರೆ ಹುಲಿ –ಚಿರತೆಗಳು ದಾಳಿ ಮಾಡುತ್ತವೆ. ಇದರ ಜೊತೆಗೆ ಜೋತೆ ಬೀದಿ ನಾಯಿಗಳು ತೊಂದರೆ ನೀಡುತ್ತಿವೆ.  ಹಳ್ಳಿಗಳಲ್ಲಿ ಪಶುಸಂಗೋಪನೆ ಮಾಡುವುದೇ ಕಷ್ಟಕರ. ಕಬ್ಬು -ಬಾಳೆ ಬೆಳೆದ ರೈತರಿಗೆ ಆನೆಗಳ ಹಾವಳಿ. ರಾಗಿ,ಶೇಂಗಾ, ಮೇಕ್ಕೆ ಜೋಳ ಬೆಳೆದರೆ ಹಂದಿಗಳು ತಿಂದು ಹಾಳು ಮಾಡುತ್ತವೆ. ಹಾಗಾಗಿ ಸರ್ಕಾರ ಕಾಡು ಪ್ರಣಿಗಳಿಗೆ ಕಾಡಿನಲ್ಲೆ ಆಹಾರ ವ್ಯವಸ್ತೆ ಮಾಡುವಂತಹ ಕ್ರಮ ಕೈಗೊಳ್ಳಬೇಕು.

ಸಣ್ಣಮಾರಪ್ಪ. ಚಂಗಾವರ: ಮನುಷ್ಯ ಪ್ರಾಣಿಗಳ ಮೇಲೆ ಮಾತ್ರ ಇಂತಹ ಕ್ರೌರ್ಯ ನಡೆಸುತ್ತಿಲ್ಲ. ಪ್ರಕೃತಿ ಮನುಷ್ಯನಿಗೆ ಜೀವಿಸಲು ನೀಡಿರುವ ಪ್ರತಿಯೊಂದು ವಸ್ತುವಿನ ಮೇಲೆಯೂ ಇಂತಹ ದಬ್ಬಾಳಿಕೆ ನಡೆಸುತ್ತಾ ಬಂದಿದ್ದಾನೆ. ಪ್ರಕೃತಿ ಆಗಿಂದ್ದಾಗೆ ಎಚ್ಚರಿಕೆ ನೀಡಿದರು ಅರಿತುಕೊಳ್ಳದೆ ತನ್ನ ಕ್ರೌರ್ಯ ಮುಂದಿವರಿಸುತ್ತಿರುವುದು ಮಾತ್ರ ದುರ್ದೈವ.

ಚಿ. ಮ. ವಿನೋದ್ ಕುಮಾರ್: ಇದು ಮಾನವನಲ್ಲಿರುವ ಮಾನವೀಯ ಗುಣ ಸತ್ತುಹೋಗಿದೆ ಎಂಬುದಕ್ಕೆ ನಿದರ್ಶನ.

ವಿದ್ಯಾಶಂಕರ್:  ಭೂಮಿಯ ಮೇಲೆ ಮನುಷ್ಯನಿಗೆ ಬದುಕಲು ಎಷ್ಟು ಹಕ್ಕಿದೆಯೊ ಅಷ್ಟೇ ಹಕ್ಕು, ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ, ಸಸ್ಯಗಳಿಗೂ ಇದೆ. ಇಂಥ ಹೇಯ ಕೃತ್ಯವನ್ನೆಸಗಿದವರಿಗೆ ಕಠಿಣ ಶಿಕ್ಷೆಯೆ ಆಗಬೇಕು. ಇತ್ತೀಚೆಗೆ ಯಾರೋ ಆಹಾರದಲ್ಲಿ ಪಟಾಕಿಯ ಬಾಂಬ್ ಒಂದನ್ನು ಇಟ್ಟು ಹಸುವಿಗೆ ತಿನ್ನಿಸಿ ಆ ಹಸುವಿನ ಬಾಯಿ ಕೂಡ ಛಿದ್ರ ಆಗಿ, ಏನೂ ತಿನ್ನಲಾಗದೆ ಹಸು ಅಸುನೀಗಿದೆ. ಇದಕ್ಕೆಲ್ಲಾ  ಸರ್ಕಾರ ಪರಿಣಾಮಕರಿ ಕ್ರಮ ಕೈಗೊಳ್ಳಬೇಕು.

Advertisement

ಪುನೀತ್ ರಾಮಾಚಾರಿ:  ಈ ಕೃತ್ಯಕ್ಕೆ ಕಾರಣರು ಯಾರೇ ಆದರೂ ಅವರೆಲ್ಲರೂ ಶಿಕ್ಷೆಗೆ ಒಳಪಡಲೇಬೇಕು. ನಾಗರೀಕ ಸಮಾಜ ನಮ್ಮದು ಎಂದು ಹೇಳಲು ನನಗೆ ನಾಚಿಕೆಯಾಗುತ್ತೆ. ಮತ್ತೊಮ್ಮೆ ಈ ರೀತಿಯ ಪ್ರಕರಣ ನಡೆಯಬಾರದು.

ಸುಬ್ಬಲಕ್ಷ್ಮಿ ಬಿ.ವಿ:  ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆ ಕೊಡಬೇಕು. ಸರ್ಕಾರ ಇದನ್ನೊಂದು ಗಂಭೀರ ಪ್ರಕರಣವೆಂದು ಪರಿಗಣಿಸಬೇಕು

ಸುಜಾತ ಮರೋಳಿ: ಇದು  ನಿಜವಾಗಿಯೂ ನಾಚಿಕೆಗೇಡಿತನದ ವಿಚಾರ. ಇಂತಹ ಅಮಾನವೀಯ ಕೃತ್ಯಗಳಿಂದಾಗಿಯೇ ನಾವು ಇಂದಿನ ನರಕಸದೃಶ ಪರಿಸ್ಥಿತಿಯನ್ನು ಎದುರಿಸುತ್ತಿರುವುದು. ತಪ್ಪಿತಸ್ಥರಿಗೆ ಸರಿಯಾದ ಕ್ರಮ ಜರುಗಿಸಬೇಕು.

 

Advertisement

Udayavani is now on Telegram. Click here to join our channel and stay updated with the latest news.

Next