Advertisement
ರವೀಂದ್ರನ್ ನೇಮಕ ಕುರಿತ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ನಿರ್ಧಾ ರದಲ್ಲೂ ತಪ್ಪಾಗಿದೆ ಎಂದು ಹೇಳಿರುವ ಮುಖ್ಯ ನ್ಯಾ| ಡಿ.ವೈ.ಚಂದ್ರ ಚೂಡ್ ನೇತೃತ್ವದ ನ್ಯಾಯಪೀಠ, “ರಾಜ್ಯ ಪಾಲರು ಉಪಕುಲಪತಿಯನ್ನು ಮರು ನೇಮಕ ಮಾಡಿಕೊಳ್ಳಲು ಶಾಸನ ಬದ್ಧ ಅಧಿಕಾರವನ್ನು ಗಾಳಿಗೆ ತೂರಿದ್ದಾರೆ’ ಎಂದೂ ಅಭಿ ಪ್ರಾಯ ಪಟ್ಟಿದೆ. ಈ ಮರುನೇಮಕವು ಬಾಹ್ಯ ಪರಿಗಣನೆಯಿಂದ ಅಂದರೆ ರಾಜ್ಯ ಸರಕಾರದ ಅನಗತ್ಯ ಹಸ್ತಕ್ಷೇಪದಿಂದ ಪ್ರಭಾವಿತ ಗೊಂಡಿದೆ ಎಂದು ಹೇಳಿದ ನ್ಯಾಯಪೀಠ, ಮರುನೇಮಕವನ್ನು ಎತ್ತಿ ಹಿಡಿದು ಕೇರಳ ಹೈಕೋರ್ಟ್ ನೀಡಿದ್ದ ಎರಡು ತೀರ್ಪನ್ನೂ ವಜಾ ಮಾಡಿದೆ.
ತೀರ್ಪು ಹೊರಬೀಳುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, “ಈ ಕೆಲಸಕ್ಕೆ ಮುಖ್ಯಮಂತ್ರಿಗಳನ್ನು ನನ್ನನ್ನು ಬಳಸಿಕೊಂಡರು. ಸಿಎಂ ಪಿಣರಾಯಿ ವಿಜಯನ್ ಅವರ ಒತ್ತಡ ತಂತ್ರದಿಂದಾಗಿ ನಾನು ಮರುನೇಮಕ ಮಾಡಿ ಕೊಳ್ಳಬೇಕಾ ಯಿತು’ ಎಂದು ಗಂಭೀರ ಆರೋಪ ಮಾಡಿ ದ್ದಾರೆ. ಅಲ್ಲದೇ “ಶಿಕ್ಷಣ ಸಚಿವರನ್ನು ದೂಷಿಸುವು ದರಲ್ಲಿ ಅರ್ಥವಿಲ್ಲ. ನನ್ನ ಕಾರ್ಯಾಲಯಕ್ಕೆ ಬಂದಿದ್ದು ಸಚಿವರಲ್ಲ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎಂದುಕೊಂಡ ವ್ಯಕ್ತಿಯೊಬ್ಬರು ಬಂದು ನನ್ನ ಮೇಲೆ ಒತ್ತಡ ಹೇರಿ, ಪ್ರಭಾವ ಬೀರಲು ಯತ್ನಿಸಿದರು’ ಎಂದೂ ಹೇಳಿದ್ದಾರೆ. ತೀರ್ಪಿನ ಬಗ್ಗೆ ಸಿಎಂ ಪಿಣರಾಯಿ ಅಥವಾ ಕೇರಳ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.