Advertisement
Related Articles
Advertisement
35 ರಿಂದ 40 ಮಂದಿ ಪ್ರವಾಸಿಗರನ್ನು ಹೊತ್ತೂಯ್ಯಬಲ್ಲ ಸಾಮರ್ಥಯ ಹೊಂದಿರುವ ಈ ಅತ್ಯಾಧುನಿಕ ಶೈಲಿ ದೋಣಿ ಮನೆಯಲ್ಲಿ ಒಂದು ಹವಾನಿಯಂತ್ರಿತ ಬೆಡ್‌ರೂಂ, ಆಟ್ಯಾಚಡ್ ಮತ್ತು ಪ್ರತ್ಯೇಕ ಬಾತ್‌ರೂಂ, ಅಡುಗೆ ಕೋಣೆ, ಆಕರ್ಷಕ ಲಿವಿಂಗ್‌ರೂಮ್, ವರ್ಕ್‌ಶಾಪ್, ಸಣ್ಣ ಪಾರ್ಟಿ ಆಯೋಜನೆ ಮಾಡಲು ಸ್ಥಳಾವಕಾಶದ ವ್ಯವಸ್ಥೆ ಇದೆ. ಸುಂದರ ಪರಿಸರದ ದೃಶ್ಯವನ್ನು ನೋಡಲು ಬಾಲ್ಕನಿ ಇದ್ದು, ಅದು ಅಧುನಿಕ ಸೌಲಭ್ಯಗಳ ಎಲ್ಲಾ ಅನುಕೂಲತೆಯನ್ನು ಹೊಂದಿದೆ. ಒಬ್ಬ ಅಡುಗೆ ತಯಾರಕ, ಒಬ್ಬ ಸಹಾಯಕ, ವೈಟರ್, ದೋಣಿ ನಿಯಂತ್ರಕ ಮತ್ತು ಪ್ರವಾಸಿಗರ ಸುರಕ್ಷತೆಗೆ ನುರಿತ ಈಜು ತಜ್ಞರು ಸೇರಿದಂತೆ ಒಟ್ಟು 5 ಮಂದಿ ಬೋಟಿನಲ್ಲಿ ಖಾಯಂ ಆಗಿ ಇರುತ್ತಾರೆ.
ಮೂರು ವಿಭಾಗದಲ್ಲಿ ಯಾನ
ಡೇ ಕ್ರೂಸಿಂಗ್, ಡಿನ್ನರ್ ಕ್ರೂಸಿಂಗ್ ಮತ್ತು ಓವರ್‌ನೆçಟ್ ಸೇr …ಹೀಗೆ, ಒಟ್ಟು ಮೂರು ವಿಭಾಗವಿದೆ. ಡೇ ಕ್ರೂಸ್ ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ, ಡಿನ್ನರ್ ಕ್ರೂಸ್ ಸಂಜೆ 5ರಿಂದ ರಾತ್ರಿ 9 ಗಂಟೆಯ ವರೆಗೆ, ಓವರ್‌ನೆçಟ್ ಸೇr ಸಂಜೆ 6ರಿಂದ ಮಾರನೇ ದಿನ ಬೆಳಗ್ಗೆ 9 ಗಂಟೆಯವರೆಗೆ. ಅಲ್ಲದೆ 1- 2 ಗಂಟೆಯ ನಿಯಮಿತ ಕ್ರೂಸಿಂಗ್ ಸೇವೆಯನ್ನು ನೀಡಲಾಗುತ್ತದೆ.
ಊಟ ತಿಂಡಿ ಏನೇನು ಸಿಗುತ್ತದೆ
ಬೋಟ್‌ಹೌಸಲ್ಲಿ ಊಟ ನೀವಿದ್ದಲ್ಲಿಗೇ ಬರುತ್ತದೆ. ಬಾಯಿ ಚಪ್ಪರಿಸುವಂಥ ತಿನುಸುಗಳು. ಉಡುಪಿ ಶೈಲಿಯ ಚಪಾತಿ ಕೂರ್ಮ, ಚಿಕನ್‌ಗ್ರೇವಿ, ವೆಜ್ ಪಲ್ಯ,ಗ್ರೀನ್ ಸಲಾಡ್, ಹಪ್ಪಳ, ಉಪ್ಪಿನಕಾಯಿ, ಮೊಸರು, ಕೊಚ್ಚಿಗೆ ಅಥವಾ ಬೆಳ್ತಿಗೆ ಅನ್ನ, ಐಸ್‌ಕ್ರೀಮ್, ಸಂಜೆ ವೇಳೆ ಟೀ ಮತ್ತು ಉಡುಪಿ ಸೀಮೆಯ ಸ್ಥಳೀಯ ತಿನಸುಗಳು. ದೋಣಿ ಒಳಗೆ ಪ್ರವೇಶಿಸಿದಾಗಲೇ ವೆಲ್‌ಕಂ ಜ್ಯೂಸ್, ವೆಜ್ ಐಟಂ ನೀಡಲಾಗುತ್ತದೆ. ಅಲ್ಲದೆ ತುಳುನಾಡಿನ ಖಾದ್ಯ ಪದಾರ್ಥಗಳಾದ ಕೋರಿ ರೋಟ್ಟಿ, ಚಿಕನ್ ಸುಕ್ಕ, ಮೀನಿನ ಖಾದ್ಯ ಸೇರಿದಂತೆ ಪ್ರವಾಸಿಗರು ಬಯಸಿದ ಆಹಾರ ಪದಾರ್ಥಗಳನ್ನು ಮಾಡಿಕೊಡಲಾಗುತ್ತದೆ. ಅದಕ್ಕೆ ಹೆಚ್ಚುವರಿ ದರವನ್ನು ನೀಡಬೇಕು. ಬೋಟ್‌ನಲ್ಲಿಯೇ ರಾತ್ರಿಯನ್ನು ಕಳೆಯ ಬೇಕೆನಿಸಿದವರಿಗೆ ಮಂದ ಬೆಳಕಿನ ವ್ಯವಸ್ಥೆ ಕೂಡ ಮಾಡಲಾಗಿದೆ. ಬೋಟ್ ಹೌಸ್ ಸ್ವರ್ಣಾ ನದಿಯಲ್ಲಿ 8 ರಿಂದ 10 ಕಿ.ಮೀ ದೂರ ಸುತ್ತಾಡುತ್ತದೆ.
ಹೀಗಿದೆ ಬೋಟ್ ಹೌಸ್ಬೋಟ್ ಹೌಸ್‌ನ ಒಟ್ಟು ಉದ್ದ 73 ಅಡಿ, ಅಗಲ 15 ಅಡಿ. ಕಬ್ಬಿಣದ ದೋಣಿಯ ಮೇಲೆ ಸಂಪೂರ್ಣ ಮರದಿಂದ ಮನೆಯನ್ನು ಕಲಾತ್ಮಕವಾಗಿ ರಚಿಸಲಾಗಿದೆ. 40 ಅಶ್ವಶಕ್ತಿಯ ಎಂಜಿನ್ ಅಳವಡಿಸಲಾಗಿದೆ. ದೋಣಿ ಮನೆಯಲ್ಲಿನ ಪಯಣ ಕೇವಲ ಪ್ರವಾಸಿಗರಿಗೆ ಮಾತ್ರವಲ್ಲ, ಸ್ಥಳೀಯರಿಗೂ ಇದೆ. ನಿಜವಾಗಿಯೂ ಇದೊಂದು ಅದ್ಭುತ ಮತ್ತು ಮರೆಯಲಾಗದ ಅನುಭವ. ತೇಲುವ ಮನೆಯಲ್ಲಿ ಒಂದು ಇಡೀ ದಿನ ಕಳೆಯುವುದು ಒಂದು ಅವಿಸ್ಮರಣೀಯ ಅನುಭವ ಎನ್ನುತ್ತಾರೆ ಪ್ರವಾಸಿಗರು. ಪ್ರವಾಸೋದ್ಯಮ ಇಲಾಖೆ, ಸ್ಥಳೀಯ ಪಂಚಾಯತ್‌ನ ಅನುಮತಿ ಪಡೆದು ಬೋಟ್ ಹೌಸ್ ಯಾತ್ರೆ ನಡೆಸಲಾಗುತ್ತದೆ. ಒಂದೇ ವಿಶೇಷವೆಂದರೆ, ಬೋಟ್ ಹೌಸ್ ಯಾತ್ರೆ ಈವರೆಗೆ ಕೇರಳದಲ್ಲಿ ಮಾತ್ರ ಇತ್ತು. ಉಡುಪಿಯಲ್ಲಿ ಆರಂಭವಾಗಿರುವ ಬೋಟ್ ಹೌಸ್ ಯಾತ್ರೆ ಎಲ್ಲ ರೀತಿಯಿಂದಲೂ ಅತ್ಯುತ್ತಮವಾಗಿದೆ. ಮುಖ್ಯವಾಗಿ ಉಡುಪಿಯಲ್ಲಿ ಕೇರಳಕ್ಕಿಂತ ಹೆಚ್ಚಿನ ಹಸಿರಿನ ಪರಿಸರ, ಸುಂದರ ನದಿಯನ್ನು ಹೊಂದಿದೆ. ಅಲ್ಲಿಲ್ಲಿ ಕುದ್ರುಗಳಿದ್ದು ನೋಡಲು ಇನ್ನಷ್ಟು ಅಕರ್ಷಣೀಯವಾಗಿದೆ. ಸಣ್ಣ ಪುಟ್ಟ ಪಾರ್ಟಿ ಮಾಡುವವರಿಗೆ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಹೋಗಲು ದಾರಿ ಯಾವುದು?
ಉಡುಪಿಯಿಂದ ಸುಮಾರು 15 ಕಿ. ಮೀ. ದೂರದಲ್ಲಿರುವ ಈ ಬೋಟ್‌ಹೌಸ್ ಇದ್ದಲ್ಲಿಗೆ ಹೋಗುವುದಾದರೆ ಉಡುಪಿ ಬಸ್ಸುನಿಲ್ದಾಣದಿಂದ ಕಲ್ಯಾಣಪುರ-ಕೆಮ್ಮಣ್ಣು-ಹೂಡೆ ಮಾರ್ಗವಾಗಿ ಪಡುತೋನ್ಸೆಯಲ್ಲಿ ತಲುಪಬಹುದು. ಇಲ್ಲವಾದಲ್ಲಿ ಉಡುಪಿಯಿಂದ ಮಲ್ಪೆ-ವಡಭಾಂಡೇಶ್ವರ-ತೊಟ್ಟಂ -ಹೂಡೆ ಮಾರ್ಗವಾಗಿಯೂ ಬರಬಹುದು. ಕುಂದಾಪುರ ಕಡೆಯಿಂದ ಬರುವವರು ಹಂಗಾರಕಟ್ಟೆಯಿಂದ ಹೊಳೆದಾಟಿ ಪಡುತೋನ್ಸೆಗೆ ಬರಬಹುದು. ವಾಹನದೊಂದಿಗೆ ಹೊಳೆದಾಟಲು ಇಲ್ಲಿ ಬಾರ್ಜ್‌ನ ವ್ಯವಸ್ಥೆಯೂ ಇದೆ. ಮಾಹಿತಿಗೆ -:9900480877 ನಟರಾಜ್ ಮಲ್ಪೆ