Advertisement

ಕೇರಳ ವಿದ್ಯಾರ್ಥಿಗೆ ನಿಪಾಹ್‌ ಸೋಂಕು ದೃಢ ; ಸರ್ಕಾರದ ಸ್ಪಷ್ಟನೆ

10:17 AM Jun 05, 2019 | Team Udayavani |

ಕೊಚ್ಚಿ: ಕೊಚ್ಚಿಯ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ನಿಪಾಹ್‌ ಸೊಂಕು ತಗುಲಿರುವುದನ್ನು ಮಂಗಳವಾರ ಕೇರಳ ಆರೋಗ್ಯ ಸಚಿವಾಲಯ ದೃಢ ಪಡಿಸಿದೆ.

Advertisement

23 ವರ್ಷದ ಕಾಲೇಜು ವಿದ್ಯಾರ್ಥಿಯಲ್ಲಿ ನಿಪಾಹ್‌ ಲಕ್ಷಣ ಕಂಡುಬಂದ ಹಿನ್ನಲೆಯಲ್ಲಿ ಆತನ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢ ಪಟ್ಟಿದೆ ಎಂದು ಸಚಿವಾಲಯ ತಿಳಿಸಿದೆ.

ರೋಗ ಲಕ್ಷಣ ಕಂಡು ಬಂದಿರುವ 86 ರೋಗಿಗಳಲ್ಲಿ ಇಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 23 ರ ವಿದ್ಯಾರ್ಥಿಗೆ ಚಿಕಿತ್ಸೆನೀಡಿದ ಇಬ್ಬರು ನರ್ಸ್‌ಗಳಿಗೆ ಗಂಟಲು ಸಮಸ್ಯೆ ಮತ್ತು ಜ್ವರ ಕಾಣಿಸಿಕೊಂಡಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ತಿಳಿಸಿದ್ದಾರೆ. ಇನ್ನೋರ್ವ ರೋಗಿಯ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಪುಣೆಗೆ ಕಳುಹಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮ
ಕೇರಳ ಸರಕಾರ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂ ಡಿದೆ. ಕಳೆದ ವರ್ಷ 17 ಮಂದಿಯನ್ನು ಬಲಿತೆಗೆದುಕೊಂಡ ವೈರಸ್‌ ಈಗ ಮತ್ತೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಭಾರೀ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next