Advertisement

ಎಸೆಸೆಲ್ಸಿ ಫಲಿತಾಂಶ ಪ್ರಕಟ: ಶೇ. 97.84 ತೇರ್ಗಡೆ

07:25 AM May 04, 2018 | |

ಕಾಸರಗೋಡು: ಪ್ರಸ್ತುತ ಶೈಕ್ಷಣಿಕ ವರ್ಷದ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯ ಫಲಿತಾಂಶ ಗುರುವಾರ ಬೆಳಗ್ಗೆ ಪ್ರಕಟಿಸಲಾಯಿತು. ಶೇ.97.84 ವಿದ್ಯಾರ್ಥಿಗಳು ತೇರ್ಗಡೆ ಯಾಗಿರುವುದಾಗಿ ಶಿಕ್ಷಣ ಸಚಿವ ಪ್ರೊ| ಸಿ. ರವೀಂದ್ರನಾಥ್‌ ತಿಳಿಸಿದರು. 

Advertisement

ಕಳೆದ ವರ್ಷಕ್ಕಿಂತ ಈ ಬಾರಿ ಶೇ. ಫಲಿತಾಂಶದಲ್ಲಿ ಹೆಚ್ಚಳವಾಗಿದೆ. ಕಳೆದ ವರ್ಷ ಶೇ. 95.98 ಫಲಿತಾಂಶ ಬಂದಿತ್ತು. ಅಂದರೆ ಕಳೆದ ವರ್ಷಕ್ಕಿಂತ ಈ ಬಾರಿ ಶೇ. 1.86 ಅಧಿಕ ಫಲಿತಾಂಶ ಬಂದಿದೆ.

ಪರೀಕ್ಷೆ ಬರೆದ 4,41,103 ಮಂದಿ ವಿದ್ಯಾರ್ಥಿಗಳ ಪೈಕಿ 4,31,162 ಮಂದಿ ತೇರ್ಗಡೆಯಾಗಿದ್ದಾರೆ. 34,313 ಮಂದಿ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಎ ಪ್ಲಸ್‌ನಲ್ಲಿ ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ 20,967 ಮಂದಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್‌ ಪಡೆದಿದ್ದರು. ಖಾಸಗಿಯಾಗಿ ಪರೀಕ್ಷೆ ಬರೆದ 2,784 ಮಂದಿ ಪೈಕಿ 2,085 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅಂದರೆ ಶೇ. 75.67.
ಶೈಕ್ಷಣಿಕ ಜಿಲ್ಲಾ ಮಟ್ಟದಲ್ಲಿ ಎರ್ನಾಕುಳಂ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಈ ಜಿಲ್ಲೆಯಲ್ಲಿ ಶೇ. 99.12 ಮಂದಿ ತೇರ್ಗಡೆಯಾಗಿದ್ದಾರೆ. ಅತ್ಯಂತ ಹಿಂದಿನ ಸಾಲಿನಲ್ಲಿ ವಯನಾಡು ಜಿಲ್ಲೆಯಿದೆ. ವಯನಾಡು ಜಿಲ್ಲೆಯಲ್ಲಿ ಶೇ. 93.87ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಮಲಪ್ಪುರಂ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್‌ ಪಡೆದಿದ್ದಾರೆ. ಈ ಜಿಲ್ಲೆಯಲ್ಲಿ 2,435 ಮಂದಿ ತೇರ್ಗಡೆಯಾಗಿದ್ದಾರೆ. ಕೊಲ್ಲಿ ವಲಯದಲ್ಲಿ ಪರೀಕ್ಷೆ ಬರೆದ 544 ಮಂದಿ ಪೈಕಿ 538 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 517 ಸರಕಾರಿ ಶಾಲೆಗಳಲ್ಲಿ, 659 ಅನುದಾನಿತ ಶಾಲೆಗಳಲ್ಲಿ ಶೇ.100 ಫಲಿತಾಂಶ ಬಂದಿದೆ. ಟಿ.ಎಚ್‌.ಎಸ್‌.ಎಸ್‌.ಸಿ.ಯಲ್ಲಿ 3,279 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 3,234 ಮಂದಿ ತೇರ್ಗಡೆಯಾಗಿದ್ದಾರೆ. ಅಂದರೆ ಶೇ. 98.6 ತೇರ್ಗಡೆಯಾಗಿದ್ದಾರೆ.

ಸೇ ಪರೀಕ್ಷೆ  ಮೇ21-25
ಮರು ಮೌಲ್ಯ ಮಾಪನಕ್ಕೆ ಮೇ 10ರ ವರೆಗೆ ಅರ್ಜಿ ಸಲ್ಲಿಸಬಹುದು. ಸೇ ಪರೀಕ್ಷೆ ಮೇ 21ರಿಂದ 25ರ ವರೆಗೆ ನಡೆಯಲಿದೆ. ಪ್ಲಸ್‌ ವನ್‌ ಪ್ರವೇಶಾತಿ ಪ್ರಕ್ರಿಯೆ ಮೇ 9ರಿಂದ ಆರಂಭಗೊಳ್ಳಲಿದೆ. ಈ ಬಾರಿ ಉಚಿತ ಅಂಕ ಅಥವಾ ಮೋಡರೇಶನ್‌ ನೀಡಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next