ಬೇಕಾಗುವ ಸಾಮಗ್ರಿ
ಅಕ್ಕಿಹಿಟ್ಟು: 1 ಕಪ್
ಉಪ್ಪು: ಸ್ವಲ್ಪ
ತೆಂಗಿನ ತುರಿ: 1 ಕಪ್
ಕಡಲೆ ಪದಾರ್ಥಕ್ಕೆ:
ನೆನೆಸಿಟ್ಟ ಕಡಲೆ: 1 ಕಪ್
ಎಣ್ಣೆ: ಸ್ವಲ್ಪ
ಏಲಕ್ಕಿ, ಜೀರಿಗೆ: ಸ್ವಲ್ಪ
ಈರುಳ್ಳಿ: ಒಂದು
ಬೆಳ್ಳುಳ್ಳಿ: 4ಎಸಳು
ಟೊಮೇಟೊ: 1
ತೆಂಗಿನ ತುರಿ: ಅರ್ಧ
ಕರಿಬೇವು: 5
ಮೆಣಸಿನ ಹುಡಿ: 4 ಚಮಚ
ಕೊತ್ತಂಬರಿ ಹುಡಿ: ಅರ್ಧ ಚಮಚ
ಅರಶಿನ: 1/4 ಚಮಚ
ಹಸಿಮೆಣಸು: ಎರಡು
ಮೊದಲು ಒಂದು ಪಾತ್ರೆಗೆ ಅಕ್ಕಿ ಹುಡಿ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಶ್ರಮಾಡಬೇಕು. ಅನಂತರ ಅದಕ್ಕೆ ಸ್ವಲ್ಪ ನೀರು ಚಿಮುಕಿಸಿ ಅಕ್ಕಿ ಹುಡಿ ನೆನೆಯುವಂತೆ ಮಾಡಬೇಕು. ಅನಂತರ ಪುಟ್ಟು ಮಾಡುವ ಕೊಳವೆಯಾಕೃತಿಯ ಪಾತ್ರೆಗೆ ತೆಂಗಿನ ತುರಿ ಹಾಗೂ ಅಕ್ಕಿ ಹುಡಿಯನ್ನು ಲೇಯರ್ ಲೇಯರ್‌ಗಳಾಗಿ ಹಾಕಿ ಬೇಯಿಸಬೇಕು. ಕಡಲೆ ಪದಾರ್ಥ ಮಾಡಲು ಮೊದಲು ನೆನೆಸಿಟ್ಟ ಕಡಲೆಯನ್ನು ಬೇಯಿಸಬೇಕು. ಅನಂತರ ಒಂದು ಪಾತ್ರೆಗೆ ಸ್ವಲ ಎಣ್ಣೆ ಹಾಕಿ ಅದು ಬಿಸಿಯಾಗುವಾಗ ಜೀರಿಗೆ, ಏಲಕಿ,R ಈರುಳ್ಳಿ, ಬೆಳ್ಳುಳ್ಳಿ ಹಾಕಿ ಹುರಿದುಕೊಳ್ಳಬೇಕು. ಅನಂತರ ಅದಕ್ಕೆ ಟೊಮೇಟೊ, ಮೆಣಸಿನ ಹುಡಿ, ಅರಶಿನ, ಕೊತ್ತಂಬರಿ ಹುಡಿ, ತೆಂಗಿನ ತುರಿ ಹಾಕಿ ಮಿಶ್ರ ಮಾಡಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಅದಕ್ಕೆ ಈರುಳ್ಳಿ ಹಾಗೂ ಹಸಿಮೆಣಸು ಹಾಕಿ ಕೆಂಬಣ್ಣ ಬರುವವರೆಗೆ ಹುರಿಯಬೇಕು. ಅನಂತರ ಅರೆದ ಮಸಾಲೆ ಹಾಗೂ ಬೇಯಿಸಿದ ಕಡಲೆಯನ್ನು ಹಾಕಿ, ಉಪ್ಪು ಹಾಕಿ ಚೆನ್ನಾಗಿ ಕುದಿಸಬೇಕು. ಪುಟ್ ಹಾಗೂ ಕಡಲೆಪದಾರ್ಥದ ಕಾಂಬಿನೇಷನ್ ಸೂಪರ್.
- ಸುಶ್ಮಿತಾ ಶೆಟ್ಟಿ ಸಿರಿಬಾಗಿಲು