Advertisement

ಬಡತನದಿಂದ 10ನೇ ಕ್ಲಾಸ್‌ ಬಿಟ್ಟು ಮನೆ ಕೆಲಸ, ಬೀಡಿ ರೋಲ್‌ ಮಾಡುತ್ತಿದ್ದ ಕೇರಳದ ವ್ಯಕ್ತಿ ಇಂದು ಅಮೆರಿಕಾದಲ್ಲಿ ನ್ಯಾಯಾಧೀಶ

01:09 PM Jan 08, 2023 | Team Udayavani |

ವಾಷಿಂಗ್ಟನ್:‌ ಜೀವನದಲ್ಲಿ ಕಷ್ಟಪಟ್ಟು ಮೇಲೆ ಬಂದರೆ ಅಂದುಕೊಂಡದ್ದನ್ನು ಮಾಡಲು ಖಂಡಿತ ಸಾಧ್ಯವಾಗುತ್ತದೆ. ಕಷ್ಟಪಟ್ಟು ಕನಸಿಗಾಗಿ ದುಡಿದರೆ ಮುಂದೊಂದು ದಿನ ಯಶಸ್ಸಿನ ಹಾದಿಯಲ್ಲಿ ನಾವು ನಡೆಯಬಹುದು.

Advertisement

ಕೇರಳದ ಕಾಸರಗೋಡು ಮೂಲದ 51 ವರ್ಷದ ಸುರೇಂದ್ರನ್ ಕೆ ಪಟೇಲ್ ಅವರ ಜೀವನನದ ಕಥೆಯೂ ಹೀಗೆಯೇ. ಅವರಿಂದು ಅಮೆರಿಕಾದ ಟೆಕ್ಸಾಸ್‌ ನ ಜಿಲ್ಲಾ ನ್ಯಾಯಾಧೀಶರಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಆದರೆ ಅವರು ನಡೆದು ಬಂದ ಹಾದಿಯಲ್ಲಿ ಕಲ್ಲು ಮುಳ್ಳಿನ ಸವಾಲಗಳಿದ್ದವು.

ಇತ್ತೀಚೆಗಷ್ಟೇ ಟೆಕ್ಸಾಸ್‌ನಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸುರೇಂದ್ರನ್ ಆರಂಭಿಕ ದಿನಗಳ ಬಗ್ಗೆ ಎನ್‌ ಡಿಟಿವಿ ಜೊತೆ ಮಾತಾನಾಡಿದ್ದಾರೆ.

ಕೇರಳದ ಕಾಸರಗೋಡು ಮೂಲದವರಾದ ಸುರೇಂದ್ರನ್‌ ಬಡ ಕುಟುಂಬದಲ್ಲಿ ಹುಟ್ಟಿ ಬೆಳದವರು, ಈ ಬಗ್ಗೆ ಮಾತಾನಾಡುವ ಅವರು, “ನಾನು ಹತ್ತನೇ ತರಗತಿ ಮುಗಿದ ಬಳಿಕ ಶಾಲೆಗೆ ಹೋಗಲಿಲ್ಲ. ಏಕಂದರೆ ನನ್ನನ್ನು ಶಾಲೆಗೆ ಕಳುಹಿಸಲು ನನ್ನ ಕುಟುಂಬದ ಬಳಿ ಹಣವಿರಲಿಲ್ಲ. ಶಾಲೆಗೆ ಹೋಗದೇ ಬೀಡಿ ಕಟ್ಟುಗಳನ್ನು ರೋಲ್‌ ಮಾಡಲು ಹೋಗುತ್ತಿದ್ದೆ. ಮನೆ ಕೆಲಸಕ್ಕೆ ಅಲ್ಲಿ ಇಲ್ಲಿ ಹೋಗುತ್ತಿದ್ದೆ. ಹೀಗೆ ಹೋಗುತ್ತಿದ್ದಾಗ ನನ್ನ ಜೀವನದ ದೃಷ್ಟಿಕೋನ ದಿನ ಕಳೆದಂತೆ ಏನಾದರು ಮಾಡಬೇಕೆನ್ನುವ ಕಡೆಗೆ ವಾಲಿತು” ಎನ್ನುತ್ತಾರೆ.

ಇದನ್ನೂ ಓದಿ: ಮಂಗಳೂರು: ಕೋಟ್ಯಾಂತರ ಮೌಲ್ಯದ ಅಂಬರ್ ಗ್ರೀಸ್ ಮಾರಾಟಕ್ಕೆ ಯತ್ನಿಸಿದ ಇಬ್ಬರ ಬಂಧನ

Advertisement

“ನನ್ನ ಮನೆಯ ಪಕ್ಕದವರು, ಊರಿನವರು ನನ್ನ ಶಿಕ್ಷಣಕ್ಕೆ ಸಹಾಯ ಮಾಡಿದರು. ಇದರಿಂದ ನಾನು ಕಾನೂನು ಪದವಿ ಶಿಕ್ಷಣವನ್ನು  ಮುಗಿಸಲು ಸಾಧ್ಯವಾಯಿತು. ಓದುವ ಸಮಯದಲ್ಲಿ ಖರ್ಚಿಗಾಗಿ ಮನೆ ಕೆಲಸಕ್ಕೂ ಹೋಗುತ್ತಿದ್ದೆ. ಎಲ್‌ ಎಲ್‌ ಬಿ ಓದು ಮುಗಿಸಿದ ಬಳಿಕ ಭಾರತದಲ್ಲಿ ಕಾನೂನಿನ ಅಭ್ಯಾಸವನ್ನು ಮಾಡಿದ ಪರಿಣಾಮ ಇದು ನನಗೆ ಅಮೆರಿಕಾದಲ್ಲಿ ತುಂಬಾ ಸಹಾಯ ಮಾಡಿತು” ಎನ್ನುತ್ತಾರೆ ಸುರೇಂದ್ರನ್.

ನಾನು ಟೆಕ್ಸಾಸ್‌ ನಲ್ಲಿ ಈ ಸ್ಥಾನಕ್ಕಾಗಿ ಸ್ಪರ್ಧಿಸಿದಾಗ, ನನ್ನ ಉಚ್ಚಾರಣೆಯನ್ನು ಕೆಲ ಮಂದಿ ವ್ಯಂಗ್ಯವಾಡಿದರು. ನನ್ನ ಬಗ್ಗೆ ನಕಾರಾತ್ಮಕ ಪ್ರಚಾರ ಮಾಡಿದರು. ನನ್ನ ಪಕ್ಷ ಕೂಡ ನಾನು ಗೆಲ್ಲುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಯಾರೂ ಕೂಡ ನಾನು ಇದನ್ನು ಸಾಧಿಸುತ್ತೇನೆ ಎಂದು ನಂಬಿರಲಿಲ್ಲ. ನಾನು ಎಲ್ಲರಿಗೂ ಮಾತು ಹೇಳುತ್ತೇನೆ, ಯಾರನ್ನೂ ನಿಮ್ಮ ಭವಿಷ್ಯವನ್ನು ನಿರ್ಧರಿಸಲು ಬಿಡಬೇಡಿ, ನಿಮ್ಮ ಭವಿಷ್ಯವನ್ನು ನೀವೇ ನಿರ್ಧರಿಸಬೇಕಿರುವುದು ನೀವೇ ಎನ್ನುತ್ತಾರೆ ಸುರೇಂದ್ರನ್.

Advertisement

Udayavani is now on Telegram. Click here to join our channel and stay updated with the latest news.

Next