Advertisement

ಸೈಕಲ್ ಕದ್ದ ಹುಡುಗನಿಗೆ ಹೊಸ ಸೈಕಲನ್ನೇ ಉಡುಗೊರೆ ರೂಪದಲ್ಲಿ ಕೊಟ್ಟ ಪೊಲೀಸ್ ಅಧಿಕಾರಿ.!

07:50 PM Apr 28, 2021 | Team Udayavani |

ತಪ್ಪುಗಳನ್ನು ಮಾಡಿದರೆ ಹುಡುಕಿಕೊಂಡು ಶಿಕ್ಷೆಯನ್ನು ನೀಡುವುದು ಪೊಲೀಸರ ಕರ್ತವ್ಯ. ಇಂಥ ಪೊಲೀಸರನ್ನು ನಾವು ಕರುಣೆಯಿಲ್ಲದವರು,ತುಂಬಾ ಜೋರು ಅಂಥ ಅಂದುಕೊಳ್ಳುತ್ತೇವೆ.  ಆದರೆ ಇದನ್ನು ಸುಳ್ಳಾಗಿಸಿ ಮಾನವೀಯತೆ ಸಾರಿದ ಎಷ್ಟೋ ಪೊಲೀಸರು ನಮ್ಮ  ಮುಂದೆ ಇದ್ದರೂ, ಕಣ್ಣ ಮುಂದೆ ಮಾತ್ರ ಅಪರೂಪಕ್ಕೆ ಕಾಣುತ್ತಾರೆ.

Advertisement

ಕೇರಳದ ಶೋಲಾಯೂರು ಪ್ರದೇಶದಲ್ಲಿ ಈ ಘಟನೆ ಲತೀಫ್ ಅತ್ತಪಾಡಿ ಎನ್ನುವ ವ್ಯಾಪಾರಿ ಬರೆದ ಫೇಸ್‌ಬುಕ್‌ ಫೋಸ್ಟ್ ನಿಂದ ವೈರಲ್ ಆಗಿದೆ.

ಬಾಲಕನೊಬ್ಬನ ಹೊಸ ಸೈಕಲ್ ಕಳವು ಆಗಿದೆ‌. ಬಾಲಕನ ಅಪ್ಪ ಅಮ್ಮ ಎಲ್ಲಿ ಎಂದು ಹುಡುಕಿಕೊಂಡು ಹೋಗಿ ಕೊನೆಗೆ ಸೈಕಲ್ ಸಿಕ್ಕದಿದ್ದಾಗ ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸುತ್ತಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸಿದಾಗ, ಬಹುಬೇಗನೆ ಪೊಲೀಸರು ಕಳವುವಾದ ಸೈಕಲ್ ನ್ನು ಪತ್ತೆ ಹಚ್ಚುತ್ತಾರೆ.

ಮನೆಯ ಪಕ್ಕದ ಹುಡುಗನೇ ಕಳ್ಳ.! :

ಬಾಲಕನ ಮನೆಯವರು ದಾಖಲಿಸಿದ ಪ್ರಕರಣದ ಜಾಡು ಹಿಡಿದು ಸಾಗಿದ ಪೊಲೀಸರು, ತನಿಖೆ ನಡೆಸಿದಾಗ ಬಾಲಕನ‌ ಮನೆಯ ಪಕ್ಕದ ಮನೆಯಲ್ಲಿ ಕದ್ದ ಸೈಕಲ್ ಪಾರ್ಕ್ ಮಾಡಿರುತ್ತಾರೆ. ತಕ್ಷಣ ಇದನ್ನು ವಿಚಾರಿಸಿದ ಪೊಲೀಸರು, ಸೈಕಲ್ ನ್ನು ಕಳವು ಮಾಡಿದ ಮೂರನೇ ತರಗತಿಯ ಹುಡುಗನನ್ನು ವಿಚಾರಣೆ ‌ನಡೆಸುತ್ತಾರೆ.

Advertisement

ಪೊಲೀಸರ ಮಾತಿಗೆ ಉತ್ತರಿಸಿದ ಹುಡುಗ ತನಗೆ ಸೈಕಲ್ ಅಂದರೆ ತುಂಬಾ ಇಷ್ಟ, ಸೈಕಲ್ ನಲ್ಲಿ ತಿರುಗಾಟ ನಡೆಸುವುದು ಅಂದರೆ ಪಂಚಪ್ರಾಣ ಅದಕ್ಕಾಗಿ, ಹೊಸ ಸೈಕಲ್ ನ ಪಯಣದ ಅನುಭವ ಪಡೆಯಲು ಸೈಕಲ್ ನಲ್ಲಿ ಸುತ್ತಾಟ ನಡೆಸಿ‌ ಮನೆಯಲ್ಲಿ ನಿಲ್ಲಿಸಿದೆ ಎಂದು ಹೇಳಿದ್ದಾನೆ.

ಪೊಲೀಸರು ಸೈಕಲ್ ಕದ್ದ ಹುಡುಗನನ್ನು ವಿಚಾರಣೆ ನಡೆಸಿ ಹಾಗೆಯೇ ಬಿಡಲಿಲ್ಲ. ಮುಖ್ಯ ಪೊಲೀಸ್ ಅಧಿಕಾರಿ ವಿನೋದ್ ಕೃಷ್ಣ ಎಂಬುವವರು ಹುಡುಗನ ಮಾತು ಕೇಳಿ ಈ ಘಟನೆಯಿಂದ ತುಂಬಾ ಭಾವುಕರಾಗುತ್ತಾರೆ. ಸೈಕಲ್ ನ್ನು ಪಂಚಪ್ರಾಣ ಅಂಥ ಅಂದುಕೊಂಡಿದ್ದ ಹುಡುಗನಿಗೆ ಪೊಲೀಸ್ ಅಧಿಕಾರಿ ಒಂದು ಉಡುಗೊರೆ ಕೊಡಲು ನಿರ್ಧರಿಸುತ್ತಾರೆ. ಅದುವೇ ಹುಡುಗನ ಮೆಚ್ಚಿನ ಸೈಕಲ್.!

ಪೊಲೀಸ್ ಅಧಿಕಾರಿ ವಿನೋದ್ ಕೃಷ್ಣ. ಸೈಕಲ್ ಕದ್ದ ಹುಡುಗನಿಗೆ ಲತೀಫ್ ಅವರ ಸೈಕಲ್ ಅಂಗಡಿಯಿಂದ ಸೈಕಲ್ ಕೊಂಡು ನೀಡುತ್ತಾರೆ. ಈ ಎಲ್ಲಾ ಘಟನೆಯನ್ನು ಕೇಳಿದ ಲತೀಫ್ ತಮ್ಮ ಬಾಲ್ಯದ ದಿನಗಳನ್ನು ‌ಮೆಲುಕು ಹಾಕುತ್ತಾ, ಪೊಲೀಸ್ ಅಧಿಕಾರಿಯ ಹೃದಯವಂತಿಕೆಯನ್ನು ಫೇಸ್‌ಬುಕ್‌ ನಲ್ಲಿ ಬರೆಯುತ್ತಾರೆ.

ಲತೀಫ್ ಅವರ ಈ ಫೇಸ್‌ಬುಕ್‌ ಪೋಸ್ಟ್ ಕೆಲವೇ ದಿನಗಳಲ್ಲಿ 13 ಸಾವಿರಕ್ಕೂ ಹೆಚ್ಚು ಶೇರ್ ಆಗುತ್ತದೆ.‌ ಹುಡುಗನ ಖುಷಿಗೆ ಸೈಕಲ್ ಕೊಟ್ಟ‌ ಪೊಲೀಸ್ ಅಧಿಕಾರಿಯ ಮಾನವೀಯತೆಯ ಮನಸ್ಸಿಗೆ ಎಲ್ಲೆಡೆಯಿಂದ  ಪ್ರಶಂಸೆ ವ್ಯಕ್ತವಾಗುತ್ತಿದೆ.

 

– ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next