Advertisement

ಪ್ರವಾಸಿಗರಿಗೆ ರಕ್ಷಣೆ: ಪೊಲೀಸರಿಗೆ ವಿವಿಧ ಭಾಷೆ ಕಲಿಕೆ

01:45 AM Oct 03, 2018 | Karthik A |

ಕಾಸರಗೋಡು: ಕೇರಳದ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರಿಗೆ ಪದೇ ಪದೆ ಎದುರಾಗುತ್ತಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಪೊಲೀಸರಿಗೆ ವಿವಿಧ ಭಾಷೆಗಳನ್ನು ಕಲಿಸುವ ಮತ್ತು ಆ ಮೂಲಕ ಪ್ರವಾಸಿಗರೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳಲು, ರಕ್ಷಣೆ ಒದಗಿಸಲು ಸಾಧ್ಯವಾಗಲು ವಿವಿಧ ಯೋಜನೆಗಳನ್ನು ಸಾಕಾರಗೊಳಿಸಲು ತೀರ್ಮಾನಿಸಿದೆ.

Advertisement

ಕೇರಳದ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡುವ ಸ್ವದೇಶಿ ಹಾಗೂ ವಿದೇಶಿ ಪ್ರವಾಸಿಗರಿಗೆ ಉತ್ತಮ ಸೌಕರ್ಯ ಕಲ್ಪಿಸಲು ಪೊಲೀಸರನ್ನು ಸಜ್ಜುಗೊಳಿಸಲಾಗುವುದು. ಪ್ರಮುಖ ಕೇಂದ್ರಗಳಲ್ಲಿ ಪ್ರವಾಸಿ ಸಹಾಯ ಕೇಂದ್ರಗಳನ್ನು ಆರಂಭಿಸಲಾಗುವುದು. ವಿವಿಧ ರಾಜ್ಯಗಳಿಂದ ಮತ್ತು ವಿವಿಧ ದೇಶಗಳಿಂದ ಬರುವ ಪ್ರವಾಸಿಗರೊಂದಿಗೆ ಸಂಪರ್ಕವನ್ನು ಸಾಧ್ಯಸಲು ಪೊಲೀಸರಿಗೆ ವಿವಿಧ ಭಾಷೆಗಳನ್ನು ಕಲಿಸಿಕೊಡಲು ತೀರ್ಮಾನಿಸಲಾಗಿದೆ. ಈ ಮೂಲಕ ಪ್ರವಾಸಿಗರ ಸಮಸ್ಯೆಗಳನ್ನು ಆಲಿಸಲು ಸಾಧ್ಯವಾಗುವುದು. ಇದಕ್ಕಾಗಿ ಪೊಲೀಸರಿಗೆ ಪ್ರತ್ಯೇಕ ಆ್ಯಪ್‌ ಕಲ್ಪಿಸಲಾಗುವುದು. ಪ್ರವಾಸಿಗರಿಗೆ ಸೌಹಾರ್ದ ಪರಿಸರವನ್ನು ಕಲ್ಪಿಸುವುದು ಕೂಡ ಉದ್ದೇಶವಾಗಿದೆ. ರಾಜ್ಯದಲ್ಲಿ ಸಾಕಷ್ಟು ಪ್ರವಾಸಿ ಕೇಂದ್ರಗಳಿದ್ದರೂ ಅವುಗಳ ನಿರ್ವಹಣೆ ಸುಗಮವಾಗಿ ಸಾಗುತ್ತಿಲ್ಲ. ಇದಕ್ಕಾಗಿ ಪೊಲೀಸರಿಗೆ ಪ್ರತ್ಯೇಕ ತರಬೇತಿ ನೀಡಿ ಪ್ರವಾಸಿಗರಿಗೆ ಸಂಪೂರ್ಣ ಸಂರಕ್ಷಣೆ ನೀಡುವ ಮೂಲಕ ಪ್ರವಾಸಿಗರನ್ನು ಹೆಚ್ಚೆಚ್ಚು ಆಕರ್ಷಿಸಲು ಸಾಧ್ಯವಾಗಲಿದೆ.

ಸ್ವದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಲು ಬರುವ ಪ್ರದೇಶವೆಂದರೆ ಕೇರಳ. ಇಲ್ಲಿ ಇದೀಗ ಸಾಕಷ್ಟು ಸೌಕರ್ಯಗಳಿಲ್ಲ. ಅಲ್ಲದೆ ಸಂರಕ್ಷಣೆ ಕೂಡ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಈ ಕೊರತೆಯನ್ನು ನೀಗಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಕೇರಳದಲ್ಲಿ ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲು ಸಾಕಷ್ಟು ಅವಕಾಶಗಳಿದ್ದರೂ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ. ಪ್ರವಾಸೋದ್ಯಮ ಸಂಬಂಧ ನಡೆಯುವ ಎಲ್ಲಾ ಸಭೆಗಳಲ್ಲೂ ಕೇರಳದಲ್ಲಿ ಪ್ರವಾಸಿಗರಿಗೆ ಸರಿಯಾದ ಸಂರಕ್ಷಣೆ ಲಭಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಲೇ ಇರುತ್ತವೆ. ಇದನ್ನು ಪರಿಗಣಿಸಿ ಪೊಲೀಸರನ್ನು ಪ್ರವಾಸಿ ಕೇಂದ್ರಗಳಲ್ಲಿ ಬಳಸಿಕೊಳ್ಳುವುದು ಮತ್ತು ಅವರಿಗೆ ವಿವಿಧ ಭಾಷೆಗಳನ್ನು ಕಲಿಸುವ ಮೂಲಕ ಈ ಪ್ರವಾಸಿಗರಿಗೆ ಉತ್ತಮ ಗೈಡ್‌ ಎಂಬ ರೀತಿಯಲ್ಲಿ ಪೊಲೀಸರನ್ನು ಬಳಸಿಕೊಳ್ಳಲಾಗುವುದು.

ಕೇರಳದ ವಿವಿಧ ಪ್ರವಾಸಿ ಕೇಂದ್ರಗಳು ಮಾದಕ ವಸ್ತುಗಳ ಮಾಫಿಯಾಗಳ ಸ್ವರ್ಗವಾಗಿ ಬದಲಾಗಿದೆ. ಇಂತಹ ಪರಿಸ್ಥಿತಿಯಿಂದ ಪಾರು ಮಾಡಲು ಮಾದ‌ಕ ದ್ರವ್ಯ ಮಾಫಿಯಾಗಳನ್ನು ನಿಗ್ರಹಿಸುವ ಉದ್ದೇಶದಿಂದ ಇಂತಹ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನೇಮಿಸಲಾಗುವುದು ಎಂದು ಡಿಜಿಪಿ ಲೋಕನಾಥ್‌ ಬೆಹ್ರಾ ಅವರು ಹೇಳಿದ್ದಾರೆ. ಪ್ರವಾಸೋದ್ಯಮವನ್ನು ಕೇರಳದಲ್ಲಿ 

ಪ್ರವಾಸಿಗರಿಗೆ ಸಂರಕ್ಷಣೆ ಒದಗಿಸಲು ಈಗಾಗಲೆ ರಾಜ್ಯದ ವಿವಿಧೆಡೆಯಾಗಿ 49 ಪ್ರವಾಸಿ ಸುರಕ್ಷಾ ಸಹಾಯ ಕೇಂದ್ರಗಳನ್ನು ರೂಪಿಸಲಾಗಿದೆ. ಇನ್ನೂ ಆರು ಕೇಂದ್ರಗಳನ್ನು ತೆರೆಯಲಾಗುವುದು. ಪ್ರವಾಸೋದ್ಯಮ ಪೊಲೀಸರು ಮತ್ತು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಈ ಕೇಂದ್ರಗಳು ಕಾರ್ಯಾಚರಿಸಲಿದೆ. ಮುಂದಿನ ವಿಶ್ವ ಪ್ರವಾಸಿ ದಿನದ ವರೆಗೆ ಪ್ರವಾಸಿಗರಿಗೆ ಸುರಕ್ಷೆ ಒದಗಿಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಪ್ರವಾಸೋದ್ಯಮ ಕೇಂದ್ರಗಳಲ್ಲಿ ದುಡಿಯುವ ಪೊಲೀಸರಿಗೆ ಪ್ರತ್ಯೇಕವಾಗಿ ಆ್ಯಪ್‌ ಸೌಲಭ್ಯ ಒದಗಿಸಲಾಗುವುದು. ಈ ಮೂಲಕ ಪೊಲೀಸರಿಗೆ ಸೂಕ್ತ ಸಲಹೆ, ನಿರ್ದೇಶಗಳನ್ನು ನೀಡಲು ಸಾಧ್ಯವಾಗುವುದು.

Advertisement

ಪೊಲೀಸ್‌ ಮ್ಯೂಸಿಯಂ ಸ್ಥಾಪನೆ  
ಪ್ರವಾಸಿಗರಿಗೆ ಗರಿಷ್ಠ ಮಟ್ಟದಲ್ಲಿ ಸಂರಕ್ಷಣೆ ಒದಗಿಸಲು ಪೊಲೀಸ್‌ ಇಲಾಖೆ ಯನ್ನು ಸಜ್ಜುಗೊಳಿಸಲಾಗುವುದು. ಅಲ್ಲದೆ ಪೊಲೀಸರಿಗೆ ವಿಶೇಷವಾದ ಆ್ಯಪ್‌ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಅಲ್ಲದೆ ರಾಜ್ಯದ ತಿರುವನಂತಪುರ, ಕೊಚ್ಚಿ ಮತ್ತು ಕಲ್ಲಿಕೋಟೆಯಲ್ಲಿ ಪೊಲೀಸ್‌ ಮ್ಯೂಸಿಯಂ ಆರಂಭಿಸಲಾಗುವುದು. ಇದಕ್ಕಾಗಿ ಪ್ರಾರಂಭಿಕ ಪ್ರಕ್ರಿಯೆಗಳು ಆರಂಭಗೊಂಡಿವೆ.
– ಲೋಕನಾಥ್‌ ಬೆಹ್ರಾ, ಡಿಜಿಪಿ

Advertisement

Udayavani is now on Telegram. Click here to join our channel and stay updated with the latest news.

Next