Advertisement

ನಿಫಾಗೆ ಬಲಿಯಾದ ನರ್ಸ್‌ ಗೆ ವಿಶ್ವಸಂಸ್ಥೆ ಗೌರವ

03:45 AM Jun 06, 2018 | Team Udayavani |

ತಿರುವನಂತಪುರ : ಕೇರಳದ ಆಸ್ಪತ್ರೆಯಲ್ಲಿ ನಿಫಾ ಸೋಂಕಿನಿಂದಾಗಿ ಕಳೆದ ತಿಂಗಳು ಮೃತಪಟ್ಟ ನರ್ಸ್‌ ಲಿನಿ ಪುದುಶೆರಿಗೆ ವಿಶ್ವ ಆರೋಗ್ಯ ಸಂಘಟನೆ ಗೌರವ ನಮನ ಸಲ್ಲಿಸಿದೆ. ರೋಗಿಗೆ ಚಿಕಿತ್ಸೆ ನೀಡುತ್ತಿದ್ದ 28 ವರ್ಷದ ಲಿನಿ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸೋಂಕು ತಗುಲಿ ಸಾವನ್ನಪ್ಪಿದ್ದರು. ಸಾವಿಗೂ ಮುನ್ನ ಪತಿಗೆ ಬರೆದ ಪತ್ರ ಹೃದಯ ಕಲಕುವಂತಿತ್ತು. ಈ ಬಗ್ಗೆ ವಿಶ್ವ ಆರೋಗ್ಯ ಸಂಘಟನೆಯ ಆರೋಗ್ಯ ಕಾರ್ಯಪಡೆ ನಿರ್ದೇಶಕ ಜಿಮ್‌ ಕ್ಯಾಂಪ್‌ ಬೆಲ್‌ ಟ್ವೀಟ್‌ ಮಾಡಿದ್ದು, ಗಾಜಾದಲ್ಲಿ ಮೃತ ನರ್ಸ್‌ ರಜಾನ್‌ ಅಲ್‌ ನಜ್ಜರ್‌, ಭಾರತದ ಲಿನಿ ಪುದುಶೆರಿ ಮತ್ತು ಲೈಬೀರಿಯಾದ ಸಲೋಮೆ ಕಾರ್ವಾಗೆ ಗೌರವ ನಮನ ಸಲ್ಲಿಸಲಾಗಿದೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next