Advertisement

ನರ್ಸ್ ಮೇಲೆ ಹಲ್ಲೆ ನಡೆಸಿ ಕಿವಿಯನ್ನೇ ಕತ್ತರಿಸಿದ ಆ್ಯಂಬುಲೆನ್ಸ್ ಚಾಲಕ!

10:15 AM Jun 02, 2019 | Nagendra Trasi |

ತಿರುವನಂತಪುರಂ: ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ ನರ್ಸ್ ಮೇಲೆ ದಾಳಿ ನಡೆಸಿ ಕಿವಿಯನ್ನು ಕತ್ತರಿಸಿರುವ ಘಟನೆ ತಿರುವನಂತಪುರದಲ್ಲಿ ಶುಕ್ರವಾರ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಹಾಡಹಗಲೇ 35 ವರ್ಷದ ಯುವಕನೊಬ್ಬ 39 ವರ್ಷದ ನರ್ಸ್ ಮೇಲೆ ಹರಿತವಾದ ಆಯುಧದಿಂದ ಆಕೆಯ ಕಿವಿಯನ್ನೇ ಕತ್ತರಿಸಿದ್ದ. ಈ ಸಂದರ್ಭದಲ್ಲಿ ಪೊಲೀಸರು ಪಹರೆ ನಡೆಸುತ್ತಿದ್ದು, ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನರ್ಸ್ ಕಿವಿ ಕತ್ತರಿಸಿದ್ದಲ್ಲದೇ ಆಕೆಯ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಬಲವಾದ ಗಾಯವಾಗಿದ್ದು, ಆಕೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ವಿವರಿಸಿದೆ.

ಆ್ಯಂಬುಲೆನ್ಸ್ ಚಾಲಕನನ್ನು ನಿತಿನ್ ಎಂದು ಗುರುತಿಸಲಾಗಿದೆ. ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಇಬ್ಬರು ಒಂದೇ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪರಿಚಿತರಾಗಿದ್ದರು. ಆದರೆ ಯಾವುದೇ ಒಂದು ವಿಚಾರದಲ್ಲಿ ಆಕೆ ಒಪ್ಪದಿದ್ದಾಗ ಆತ ಆಕೆ ಮೇಲೆ ದಾಳಿ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next