Advertisement

Kerala: ಕೇರಳದಲ್ಲಿ ಮೋದಿ ರೋಡ್‌ಶೋ

01:50 AM Jan 17, 2024 | Team Udayavani |

ಕೊಚ್ಚಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ದಕ್ಷಿಣದ ರಾಜ್ಯಗಳತ್ತ ಗಮನ ನೆಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಂಜೆ ಕೇರಳದ ಎರ್ನಾಕುಳಂನಲ್ಲಿ ಮೆಗಾ ರೋಡ್‌ ಶೋ ನಡೆಸಿದ್ದಾರೆ. 1.3 ಕಿ.ಮೀ. ರೋಡ್‌ಶೋ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯರು ನೆರೆದಿದ್ದರು.

Advertisement

ಬುಧವಾರ ಬೆಳಗ್ಗೆ ಮೋದಿ ಗುರುವಾಯೂರು ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಅನಂತರ ನಟ, ರಾಜಕಾರಣಿ ಸುರೇಶ್‌ ಗೋಪಿ ಅವರ ಪುತ್ರಿಯ ವಿವಾಹದಲ್ಲಿ ಭಾಗಿಯಾಗಲಿದ್ದಾರೆ. ಅನಂತರ ತೃಶೂರ್‌ನ ಶ್ರೀ ರಾಮ ಸ್ವಾಮಿ ದೇಗುಲಕ್ಕೂ ಭೇಟಿ ನೀಡಲಿದ್ದಾರೆ. ಹಲವು ಯೋಜನೆಗಳ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸಿದ ಬಳಿಕ ಬಿಜೆಪಿ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next