Advertisement

ಸಾವು ಬದುಕಿನ ಹೋರಾಟದಲ್ಲಿ 54 ದಿನಗಳ ಮಗು

07:35 PM Jun 21, 2020 | Sriram |

ಕೊಚ್ಚಿ:ಅನೈತಿಕ ಸಂಬಂಧದಿಂದ ಮಗು ಹುಟ್ಟಿದೆ ಎಂದು ಆರೋಪಿಸಿ, ತಂದೆ ಅದನ್ನು ಚೆನ್ನಾಗಿ ಹೊಡೆದು ಮಂಚದ ಮೇಲೆ ಎಸೆದು ಹೋದ 54 ದಿನಗಳ ಮಗು ಈಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಕೊಲೆಂಚರಿಯಲ್ಲಿ ನಡೆದಿದೆ.

Advertisement

ಮಗು ತುರ್ತು ನಿಗಾ ಘಟಕದಲ್ಲಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಮುಂದಿನ 24 ಗಂಟೆಗಳು ಬಹಳ ನಿರ್ಣಾಯಕವಾಗಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಪೊಲೀಸರು ಶೈಜು ಥಾಮಸ್‌ ಎಂಬ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ನನ್ನ ಮಗಳು ಮಗುವನ್ನು ಕೆಳಗೆ ಬೀಳಿಸಿದ್ದಾಳೆ ಎಂದು ಹೇಳಿದ್ದಾರೆ. ಆದರೆ, ವೈದ್ಯರಿಗೆ ಥಾಮಸ್‌ ಮೇಲೆ ಅನುಮಾನವಿದೆ.

ಥಾಮಸ್‌ ಗೆ ಕೋಪಿಷ್ಟನಾಗಿದ್ದು, ಕುಡಿದು ಬಂದು ಸದಾ ಮಗುವನ್ನು ಹೊಡೆಯುತ್ತಿದ್ದ. ಹೆಂಡತಿ ಅನೈತಿಕ ಸಂಬಂಧದಿಂದ ಮಗು ಹುಟ್ಟಿದೆ ಎಂದು ಗುಮಾನಿಸಿ ಹೀಗೆ ಮಾಡುತ್ತಿದ್ದ ಎನ್ನುತ್ತಾರೆ ಪೊಲೀಸರು.

ಥಾಮಸ್‌ 34 ವರ್ಷದ ಅರುಣಾಚಲ ಮೂಲದ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ ಎಂದು ಅವರು ಹೇಳಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next