Advertisement

10 ವರ್ಷದ ಬಾಲಕಿ ಮೇಲೆ ದೌರ್ಜನ್ಯ: ಆರೋಪಿಗೆ 142 ವರ್ಷ ಶಿಕ್ಷೆ ವಿಧಿಸಿದ ಕೇರಳ ಕೋರ್ಟ್

06:18 PM Oct 01, 2022 | Team Udayavani |

ತಿರುವನಂತಪುರ: ಹತ್ತು ವರ್ಷದ ಬಾಲಕಿ ಮೇಲೆ ಎರಡು ವರ್ಷಗಳ ದೈಹಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ಕೇರಳದ ಪತ್ತನಂತಿಟ್ಟದಲ್ಲಿರುವ ಪೋಕ್ಸೋ ಕೋರ್ಟ್ ಶನಿವಾರ (ಅ.01) 142 ವರ್ಷಗಳ ಕಠಿಣ ಶಿಕ್ಷೆ ಹಾಗೂ 5 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿರುವುದಾಗಿ ವರದಿಯಾಗಿದೆ.

Advertisement

ಇದನ್ನೂ ಓದಿ:`ಗಾಂಧಿ’ ಕುಟುಂಬವನ್ನು ಯಾರು ಟಾರ್ಗೆಟ್ ಮಾಡುತ್ತಿದ್ದಾರೆಂದು ರಾಹುಲ್ ಗಾಂಧಿಯೇ ಸ್ಪಷ್ಟಪಡಿಸಲಿ

ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿರುವ ಪೋಕ್ಸೋ ಕೋರ್ಟ್, ಒಂದು ವೇಳೆ ಆರೋಪಿ ದಂಡ ಪಾವತಿಸದಿದ್ದರೆ ಮತ್ತೆ ಮೂರು ವರ್ಷಗಳ ಜೈಲುಶಿಕ್ಷೆ ಅನುಭವಿಸಬೇಕೆಂದು ತಿಳಿಸಿದೆ. ಪತ್ತನಂತಿಟ್ಟ ಪೋಕ್ಸೋ ಕೋರ್ಟ್ ಪ್ರಕರಣದಲ್ಲಿ ಆರೋಪಿಗೆ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ವಿಧಿಸಿರುವುದಾಗಿ ಹೇಳಿದೆ.

ಆರೋಪಿಯನ್ನು ಆನಂದನ್ ಪಿ.ಆರ್ ಅಲಿಯಾಸ್ ಬಾಬು ಎಂದು ಗುರುತಿಸಲಾಗಿದೆ. ಪೋಕ್ಸೋ ಕೋರ್ಟ್ ಜಡ್ಜ್ ಜಯಕುಮಾರ್ ಜಾನ್ ಅವರು ಆರೋಪಿಗೆ ಗರಿಷ್ಠ 142 ವರ್ಷಗಳ ಜೈಲುಶಿಕ್ಷೆ ವಿಧಿಸಿದ್ದು, ಈತ ಒಟ್ಟು 60 ವರ್ಷ ಜೈಲುಶಿಕ್ಷೆ ಅನುಭವಿಸಬೇಕಾಗಿದೆ ಎಂದು ವರದಿ ವಿವರಿಸಿದೆ.

ಪ್ರಕರಣದ ವಿವರ:

Advertisement

ಆನಂದನ್ ಪಿ.ಆರ್ 2019 ಮತ್ತು 2021ರ ನಡುವೆ ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ ತಿರುವಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಪ್ರಾಪ್ತ ಬಾಲಕಿ ಮೇಲೆ ಹಲವಾರು ಬಾರಿ ಪೈಶಾಚಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿತ್ತು. ಈತ ಬಾಲಕಿಯ ಸಂಬಂಧಿಯಾಗಿದ್ದು, ಆಕೆಯ ಪೋಷಕರ ಜೊತೆಯೇ ವಾಸವಾಗಿದ್ದ ಎಂದು ವರದಿ ತಿಳಿಸಿದೆ.

ಪ್ರಾಸಿಕ್ಯೂಷನ್ ಪರವಾಗಿ ಪೋಕ್ಸೋ ಪ್ರಾಸಿಕ್ಯೂಟರ್ ಅಡ್ವೋಕೇಟ್ ಜೇಸನ್ ಮ್ಯಾಥ್ಯೂಸ್ ವಾದ ಮಂಡಿಸಿದ್ದರು. ಪ್ರಕರಣದಲ್ಲಿ ಸಾಕ್ಷಿಗಳ ಹೇಳಿಕೆ, ವೈದ್ಯಕೀಯ ವರದಿ ಮತ್ತು ಸಾಕ್ಷ್ಯಾಧಾರಗಳು ಪ್ರಾಸಿಕ್ಯೂಷನ್ ಪರವಾಗಿರುವುದಾಗಿ ವಾದಿಸಿದ್ದರು. ಈ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸಿ, ಕೋರ್ಟ್ ಗೆ ಆರೋಪ ಪಟ್ಟಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next