Advertisement

ಕೇರಳ: ಎಲ್‌ಡಿಎಫ್ ಸ್ಥಳೀಯ ಗೆಲುವು

12:49 AM Dec 17, 2020 | mahesh |

ತಿರುವನಂತಪುರ: 2021ರ ವಿಧಾನಸಭೆ ಮತಸಮರಕ್ಕೆ ಸೆಮಿಫೈನಲ್‌ ಎಂದೇ ಬಿಂಬಿತ­ವಾಗಿದ್ದ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಎಲ್‌ಡಿಎಫ್ ಬುಧವಾರ ಭರ್ಜರಿ ಜಯ ದಾಖಲಿಸಿದೆ.

Advertisement

ಲೆಫ್ಟ್ ಡೆಮಾಕ್ರಾಟಿಕ್‌ ಫ್ರಂಟ್‌ ಗ್ರಾ.ಪಂ., ಮಹಾನಗರ ಪಾಲಿಕೆ ಹಾಗೂ ಜಿ.ಪಂ.ಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮುನ್ಸಿಪಾಲಿಟಿ­ಗಳಲ್ಲಿ ಮಾತ್ರವೇ ನಿರಾಶೆ ಅನುಭವಿಸಿದೆ.

ಗ್ರಾ.ಪಂ. ಲೆಕ್ಕ: ಒಟ್ಟು 941 ಗ್ರಾ.ಪಂ.ಗಳಲ್ಲಿ ಎಲ್‌ಡಿಎಫ್- 541, ಯುಡಿಎಫ್- 375, ಎನ್‌ಡಿಎ-23, ಇತರೆ ಅಭ್ಯರ್ಥಿಗಳು 29 ಸ್ಥಾನಗಳಲ್ಲಿ ಗೆದ್ದಿದ್ದಾರೆ.

ಪಾಲಿಕೆಗಳೂ ಎಲ್‌ಡಿಎಫ್ಗೆ: ಒಟ್ಟು 6 ಮಹಾನಗರ ಪಾಲಿಕೆಗಳಲ್ಲಿ ಎಲ್‌ಡಿಎಫ್ 5 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ತಿರುವ­ನಂತ­ಪುರ, ಕೊಲ್ಲಂ, ಕೊಚ್ಚಿ, ತ್ರಿಶ್ಶೂರ್‌, ಕಲ್ಲಿ­ಕೋಟೆಗಳಲ್ಲಿ ಜಯ ದಾಖಲಿಸಿದೆ. ಕಣ್ಣೂರು ಪಾಲಿಕೆ ಮಾತ್ರ ಯುಡಿಎಫ್ ತೆಕ್ಕೆಗೆ ಜಾರಿದೆ. ಎನ್‌ಡಿಎ ಶೂನ್ಯ ಸಾಧನೆ ದಾಖಲಿಸಿದೆ.

ವಿಪಕ್ಷಗಳಿಗೆ ಮುನ್ಸಿಪಲ್‌: 86 ಮುನ್ಸಿಪಾಲಿಟಿಗಳಲ್ಲಿ ಯುಡಿಎಫ್ 45 ಸ್ಥಾನ ಗೆದ್ದಿದೆ. ಎಲ್‌ಡಿಎಫ್-35, ಎನ್‌ಡಿಎ-2, ಇತರೆ-4 ಸ್ಥಾನಗಳನ್ನು ಪಡೆದಿವೆ.

Advertisement

ಜಿ.ಪಂ. ಫ‌ಲಿತಾಂಶ: 14 ಜಿ.ಪಂ.ಗಳಲ್ಲಿ 11ರಲ್ಲಿ ಎಲ್‌ಡಿಎಫ್ ಗೆಲುವಿನ ಗೆರೆ ದಾಟಿದೆ. 3ರಲ್ಲಿ ಯುಡಿಎಫ್ ಗೆದ್ದಿದ್ದರೆ, ಎನ್‌ಡಿಎ ಇಲ್ಲೂ ಶೂನ್ಯ ಸಂಪಾದಿಸಿದೆ.

ಅಯ್ಯಪ್ಪನ ಕ್ಷೇತ್ರದಲ್ಲಿ ಕಮಲ
ಶಬರಿಮಲೆ ಅಯ್ಯಪ್ಪನ ಸುಕ್ಷೇತ್ರವಿರುವ ಪಂದಲಂ ಮುನ್ಸಿಪಾಲಿಟಿಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಕಂಡಿದೆ. ಒಟ್ಟು 33 ವಾರ್ಡ್‌ಗಳಲ್ಲಿ 18ರಲ್ಲಿ ಕಮಲ ಅರಳಿದೆ. 2015ರ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಕೇವಲ 7 ಸೀಟುಗಳನ್ನು ಗೆದ್ದಿತ್ತು. ಪಾಲಕ್ಕಾಡ್‌ ಮುನ್ಸಿಪಾಲಿಟಿಯಲ್ಲೂ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. 52 ಸ್ಥಾನಗಳಲ್ಲಿ 28ರಲ್ಲಿ ಗೆದ್ದಿದೆ.

ಸ್ವಾಮಿ ಅಯ್ಯಪ್ಪನ ಜನ್ಮಸ್ಥಳ ಪಂದಲಂನ ಮುನ್ಸಿಪಾಲಿಟಿ ಯಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದಿದೆ. ಅಯ್ಯಪ್ಪನ ದೇಗು­ ಲಕ್ಕೂ ಹದಿನೆಂಟೇ ಮೆಟ್ಟಿಲುಗಳು! ಇದು ಭಾವನಾತ್ಮಕ ಕ್ಷಣ.
ಬಿ.ಎಲ್‌. ಸಂತೋಷ್‌, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next