Advertisement

ಕೇರಳದಲ್ಲಿರುವ ಜಿಹಾದಿ ಸಂಘಟನೆಗಳಿಗೆ ಟರ್ಕಿ ದುಬಾಯಿ ಫಂಡಿಂಗ್: ಗುಪ್ತಚರ ಇಲಾಖೆ ಮಾಹಿತಿ

09:45 AM Jan 01, 2020 | Hari Prasad |

ನವದೆಹಲಿ: ಕೇರಳದಲ್ಲಿ ಇರುವ ಜಿಹಾದಿ ಗುಂಪುಗಳಿಗೆ ಗಲ್ಫ್ ರಾಷ್ಟ್ರಗಳಿಂದ ಹಣದ ಸಹಾಯ ಹರಿದು ಬರುತ್ತಿರುವ ಕುರಿತು ಗುಪ್ತಚರ ಇಲಾಖೆ ಮಾಹಿತಿಯನ್ನು ಸಂಗ್ರಹಿಸಿದೆ. ಜಿಹಾದಿ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಯೊಬ್ಬ ಇದೇ ವರ್ಷದ ಸೆಪ್ಟಂಬರ್ ತಿಂಗಳಿನಲ್ಲಿ ದುಬಾಯಿಗೆ ಭೇಟಿ ನೀಡಿದ್ದು ಅಲ್ಲಿ ಆತನಿಗೆ 40 ಲಕ್ಷರೂಪಾಯಿಗಳ ದೇಣಿಗೆ ನೀಡಲಾಗಿತ್ತು ಎಂಬ ಆಘಾತಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ಝೀ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.

Advertisement

ಇಷ್ಟು ಮಾತ್ರವಲ್ಲದೇ, ಇನ್ನೊಂದು ಜಿಹಾದಿ ಸಂಘಟನೆಯ ಸದಸ್ಯರು ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಟರ್ಕಿ ಮೂಲದ ಕೆಲವು ವ್ಯಕ್ತಿಗಳನ್ನು ಕತಾರ್ ನಲ್ಲಿ ಭೇಟಿಯಾಗಿದ್ದ ಸಂದರ್ಭದಲ್ಲಿ ಅವರಿಗೆ ಮತ್ತು ಸಮಾನ ಮನಸ್ಕ ವ್ಯಕ್ತಿಗಳಿಗೆ ಅಗತ್ಯ ಹಣಕಾಸು ನೆರವನ್ನು ನೀಡುವ ಭರವಸೆಯನ್ನು ಟರ್ಕಿ ಮೂಲದ ವ್ಯಕ್ತಿಗಳು ನೀಡಿದ್ದರು ಎಂಬ ಮಾಹಿತಿಯೂ ಸಹ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ.

ಈ ಮಾಹಿತಿಗೆ ಸಂಬಂಧಿಸಿದಂತೆ ಆಧರಿಸಿ ಕೇಂದ್ರ ಗೃಹ ಸಚಿವಾಲಯವು ಗುಪ್ತಚರ ಇಲಾಖೆಯಿಂದ ವಿವರವಾದ ಮಾಹಿತಿಯನ್ನು ಕೋರಿದೆ.

Advertisement

Udayavani is now on Telegram. Click here to join our channel and stay updated with the latest news.

Next