Advertisement

“ಆರೋಗ್ಯ ರಂಗದಲ್ಲಿ ಕೇರಳ ಮುಂದೆ’

01:39 AM Jan 29, 2020 | Team Udayavani |

ಕುಂಬಳೆ: ಆರೋಗ್ಯ ರಂಗದಲ್ಲಿ ಕೇರಳ ಬಹಳಷ್ಟು ಮುಂದುವರಿದ ರಾಜ್ಯವಾಗಿದ್ದು ಕೇಂದ್ರ ಸರಕಾರದ ನೀತಿ ಆಯೋಗ ರಾಜ್ಯಕ್ಕೆ ಪ್ರಥಮ ಸ್ಥಾನ ನೀಡಿದೆ. ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಬಡರೋಗಿಗ ಳಿಗೆ ಉನ್ನತ ಚಿಕಿತ್ಸೆ ಮತ್ತು ಔಷಧಗಳನ್ನು ವ್ಯವಸ್ಥಿತವಾಗಿ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದರು.

Advertisement

ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘದ ವತಿಯಿಂದ ಕುಂಬಳೆ ಸಹಕಾರಿ ಆಸ್ಪತ್ರೆಗೆ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಬಹು ಅಂತಸ್ತಿನ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಕಂದಾಯ ಸಚಿವ ಇ. ಚಂದ್ರ ಶೇಖರನ್‌ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್‌ ಉಣ್ಣಿತ್ತಾನ್‌, ಮಾಜಿ ಸಂಸದ ಪಿ. ಕರುಣಾಕರನ್‌, ಶಾಸಕರಾದ ಎಂ.ಸಿ. ಕಮರುದ್ದೀನ್‌, ಎನ್‌.ಎ. ನೆಲ್ಲಿಕುನ್ನು, ಕೆ. ಕುಂಞಿ ರಾಮನ್‌, ಎಂ. ರಾಜಗೋಪಾಲನ್‌, ಜಿ.ಪಂ. ಅಧ್ಯಕ್ಷ ಎಜಿಸಿ ಬಶೀರ್‌, ಕೋ ಆಪರೇಟಿವ್‌ ಸೊಸೈಟೀಸ್‌ ರಿಜಿಸ್ಟ್ರಾರ್‌ ಪಿ.ಕೆ. ಜಯಶ್ರೀ, ಎನ್‌ಸಿಡಿಸಿಯ ವಲಯ ನಿರ್ದೇಶಕ ಕೆ. ಸತೀಶನ್‌, ಆಸ್ಪತ್ರೆ ಫೆಡರೇಶನ್‌ ಅಧ್ಯಕ್ಷ ಪದ್ಮನಾಭ ಮಾಸ್ಟರ್‌ ಅತಿಥಿಗಳಾಗಿದ್ದರು.

ಮಾಜಿ ಸಚಿವ ಸಿ.ಟಿ. ಅಹಮ್ಮದಾಲಿ, ಮಾಜಿ ಶಾಸಕರಾದ ಪಿ. ರಾಘವನ್‌, ಕೆ. ಕುಂಞಿರಾಮನ್‌, ಕೆ.ಪಿ. ಸತೀಶ್ಚಂದ್ರನ್‌, ಸಿ.ಎಚ್‌. ಕುಞಾಂಬು, ಕೆ.ವಿ.ಕೆ. ಕುಂಞಿರಾಮನ್‌ ಉಪಸ್ಥಿತರಿದ್ದರು.

ವಾರ್ತಾ ಇಲಾಖೆ ಪ್ರಕಟಿಸಿದ ರಾಜ್ಯ ಸರಕಾರದ ಆರ್ಥಿಕ ಸಹಾಯ ಗಳು ಎಂಬ ಕನ್ನಡ ಮಾಹಿತಿ ಪುಸ್ತಕವನ್ನು ಮುಖ್ಯಮಂತ್ರಿ ಬಿಡುಗಡೆಗೊಳಿಸಿದರು. ಗುತ್ತಿಗೆದಾರ ಜಿನೇಂದ್ರನ್‌, ಎಂಜಿನಿಯರ್‌ ವಿ.ಕೆ. ಜಾಯ್‌ ಅವರನ್ನು ಸಮ್ಮಾನಿಸಿದರು. ಆಸ್ಪತ್ರೆ ಆಡಳಿತ ಅಧ್ಯಕ್ಷ ಎ. ಚಂದ್ರ ಶೇಖರ್‌ ಸ್ವಾಗತಿಸಿ, ಉಪಾಧ್ಯಕ್ಷ ಪಿ. ರಘುದೇವನ್‌ ಮಾಸ್ಟರ್‌ ವಂದಿಸಿ ದರು. ಸ.ಅಡಳಿತಾಧಿಕಾರಿ ಡಿ.ಎನ್‌. ರಾಧಾಕೃಷ್ಣ ವರದಿ ವಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next