Advertisement

ಕೇರಳ; 2 ಲಕ್ಷ ಪ್ರಕರಣ ದಾಟಿದ ಕೋವಿಡ್ ಸೋಂಕು; ರಾಜ್ಯಾದ್ಯಂತ ಸೆಕ್ಷನ್ 144 ಜಾರಿ

06:32 PM Oct 02, 2020 | Nagendra Trasi |

ತಿರುವನಂತಪುರಂ:ಕೋವಿಡ್ 19 ಸೋಂಕು ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೆಕ್ಷನ್ 144 ಅನ್ನು ರಾಜ್ಯದಲ್ಲಿ ಜಾರಿಗೊಳಿಸಿರುವುದಾಗಿ ಕೇರಳ ಸರ್ಕಾರ ಶುಕ್ರವಾರ (ಅಕ್ಟೋಬರ್ 02, 2020) ಘೋಷಿಸಿದೆ.

Advertisement

ಸೆಕ್ಷನ್ 144 ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಐದು ಜನರಿಗಿಂತ ಹೆಚ್ಚು ಮಂದಿ ಗುಂಪುಗೂಡುವಂತಿಲ್ಲ. ಈ ಆದೇಶ ಅ.3ರಿಂದ ಜಾರಿಯಾಗಲಿದ್ದು, ಅಕ್ಟೋಬರ್ 31ರವರೆಗೆ ಮುಂದುವರಿಯಲಿದೆ.

ಅತೀ ಹೆಚ್ಚು ಜನರು ಗುಂಪುಗೂಡುವುದರಿಂದ ಈ ಕೋವಿಡ್ ಮಾರಕ ಸೋಂಕು ಕ್ಷಿಪ್ರವಾಗಿ ಹರಡಲಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗುರುವಾರ ತಡರಾತ್ರಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಶ್ವಾಸ್ ಮೆಹ್ತಾ ಬಿಡುಗಡೆ ಮಾಡಿರುವ ಆದೇಶದಲ್ಲಿ ತಿಳಿಸಲಾಗಿದೆ.

ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ, ಅಲ್ಲದೇ ಅಪರಾಧ ದಂಡ ಸಂಹಿತೆ ಪ್ರಕಾರ ಸೆಕ್ಷನ್ 144 ಜಾರಿಗೊಳಿಸಿದ್ದು ಶನಿವಾರ(ಅ.3, 2020)ದಿಂದ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಆಯಾಯ ಜಿಲ್ಲೆಗಳಲ್ಲಿನ ಸ್ಥಿತಿ, ಗತಿಯ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಪರಿಶೀಲಿಸಿ, ಸೋಂಕು ತಡೆಗಟ್ಟಲು ಬೇಕಾದ ಅಗತ್ಯವಿದ್ದ ಕ್ರಮ ಮತ್ತು ಸೆಕ್ಷನ್ 144 ಜಾರಿಗೊಳಿಸಬೇಕಾಗಿದೆ ಎಂದು ಹೇಳಿದೆ.

Advertisement

ಕೇರಳದಲ್ಲಿ ಗುರುವಾರ 8,135 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 2 ಲಕ್ಷಕ್ಕೂ ಅಧಿಕ ಕೋವಿಡ್ ಪ್ರಕರಣ ವರದಿಯಾಗಿದೆ. ರಾಜ್ಯದಲ್ಲಿ ಈವರೆಗೆ ಕೋವಿಡ್ ಗೆ ಸಾವನ್ನಪ್ಪಿದವರ ಸಂಖ್ಯೆ 771ಕ್ಕೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next