Advertisement

Kerala High Court ಆದೇಶ; ಅತ್ಯಾಚಾರದ ಆರೋಪಿ, ಸಂತ್ರಸ್ತೆ ಒಪ್ಪಂದ ಅಮಾನ್ಯ

01:28 AM Aug 25, 2024 | Team Udayavani |

ತಿರುವನಂತಪುರ: ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿ ಹಾಗೂ ದೂರುದಾರರು ಕೋರ್ಟ್‌ನ ಹೊರಗೆ ಯಾವುದೇ ಒಪ್ಪಂದ ಮಾಡಿಕೊಳ್ಳುವುದು ಸಾರ್ವಜನಿಕ ನೀತಿಗೆ ವಿರುದ್ಧವಾಗಿದೆ. ಹಾಗಾಗಿ ಅದನ್ನು ಅನೂರ್ಜಿತಗೊಳಿಸಲಾಗುವುದು ಎಂದು ಕೇರಳ ಹೈಕೋರ್ಟ್‌ ಹೇಳಿದೆ.

Advertisement

ಪ್ರಕರಣವೊಂದರ ವಿಚಾ­ರಣೆ ವೇಳೆ ಹೈಕೋರ್ಟ್‌ ಈ ಆದೇಶ ನೀಡಿದೆ. ಕೋರ್ಟ್‌ನ ಹೊರಗೆ ಸಂತ್ರಸ್ತೆ ಹಾಗೂ ಆರೋಪಿ ಒಪ್ಪಂದ ಮಾಡಿಕೊಂಡು ಪ್ರಕರಣ ರದ್ದು ಮಾಡು ವಂತೆ ಮನವಿ ಮಾಡಿದ್ದಾರೆ. ಅದನ್ನು ಕೋರ್ಟ್‌ ತಿರಸ್ಕರಿಸಿದೆ. 2016ರಲ್ಲಿ ನಡೆದ ಅತ್ಯಾಚಾರ ಪ್ರಕರ­ಣದ ವಿಚಾರಣೆಯನ್ನು ಕೋರ್ಟ್‌ ನಡೆಸುತ್ತಿತ್ತು. ಪ್ರಕರಣದ ಆರೋಪಿ ಅಬ್ದುಲ್‌ ಜಲೀಲ್‌ ಪ್ರಕರಣದಿಂದ ಹೊರಬರಲು ಸಂತ್ರಸ್ತೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next