ಕಾಸರಗೋಡು: ಫ್ಯಾಶನ್ ಗೋಲ್ಡ್ ಜ್ಯುವೆಲ್ಲರ್ ಠೇವಣಿ ವಂಚನೆ ಸಂಬಂಧಿಸಿದಂತೆ ಮಂಜೇಶ್ವರ ಶಾಸಕ, ಸಂಸ್ಥೆಯ ಚೇರ್ಮನ್ ಹಾಗೂ ಮುಸ್ಲಿಂ ಲೀಗ್ ನೇತಾರ ಎಂ.ಸಿ. ಖಮರುದ್ದೀನ್ ಗೆ ಮೊದಲು ದಾಖಲಿಸಿದ್ದ ಮೂರು ಪ್ರಕರಣಗಳಲ್ಲಿ ಜಾಮೀನು ಲಭ್ಯವಾಗಿದೆ.
ಇಂದು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಕಠಿಣ ಷರತ್ತುಗಳೊಂದಿಗೆ ಶಾಸಕ ಖಮರುದ್ದೀನ್ ಗೆ ಜಾಮೀನು ನೀಡಿದೆ.
ಪ್ರತಿಯೊಂದು ಪ್ರಕರಣದಲ್ಲೂ ತಲಾ ಒಂದು ಲಕ್ಷ ರೂ. ಬಾಂಡ್, ಮೂರು ತಿಂಗಳು ಕಾಲ ಕಾಸರಗೋಡು ಜಿಲ್ಲೆಯ ಕೇಸುಗಳಿರುವ ಪೊಲೀಸ್ ಠಾಣಾ ವ್ಯಾಪ್ತಿಯೊಳಗೆ ಪ್ರವೇಶಿಸುವಂತಿಲ್ಲ ಎಂದು ಕೋರ್ಟ್ ತಿಳಿಸಿದೆ.
ಇದನ್ನೂ ಓದಿ:ಸಕ್ರೇಬೈಲು ಬಿಡಾರದಲ್ಲಿ ಮದವೇರಿದ ಮಣಿಕಂಠ ಆನೆ: ಎರಡು ಆನೆಗಳ ಮೇಲೆ ದಾಳಿ
ಮೊದಲ ಮೂರು ಪ್ರಕರಣಗಳಲ್ಲಿ ಜಾಮೀನು ಸಿಕ್ಕರೂ ಖಮರುದ್ದೀನ್ ವಿರುದ್ಧ 115ರಷ್ಟು ಕೇಸುಗಳು ದಾಖಲಾಗಿರುವ ಕಾರಣ ಸದ್ಯಕ್ಕೆ ಜೈಲಿನಿಂದ ಹೊರಬರುವುದು ಅಸಾಧ್ಯ ಎನ್ನಲಾಗಿದೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು, ಚಂದೇರ, ಪಯ್ಯನ್ನೂರು ಮುಂತಾದ ಪೊಲೀಸ್ ಠಾಣೆಗಳಲ್ಲಿ ಶಾಸಕರ ವಿರುದ್ಧ 115ರಷ್ಟು ಕೇಸುಗಳು ದಾಖಲಾಗಿವೆ