ಕೊಚ್ಚಿ: ಗರ್ಭಿಣಿಯಾಗಿ ಮುಂದುವರಿಯಬೇಕೇ ಬೇಡವೇ ಎಂಬ ನಿರ್ಧಾರ ಕೈಗೊಳ್ಳುವ ಹಕ್ಕು ಮಹಿಳೆಯರಿಗಿದ್ದು, ಅದನ್ನು ನಾವು ಕಸಿದುಕೊಳ್ಳಲಾಗದು ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಜತೆಗೆ, ಅಲ್ಪಪ್ರಮಾಣದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರಿಗೆ ತಮ್ಮ 22 ವಾರಗಳ ಅಸಹಜ ಭ್ರೂಣದ ಗರ್ಭಪಾತಕ್ಕೆ ಅವಕಾಶ ಕಲ್ಪಿಸಿದೆ.
ಒಂದು ವೇಳೆ ಮಗುವು ಹುಟ್ಟಿದ ಬಳಿಕ ಅಸಮರ್ಥತೆ ಎದುರಿಸಬಹುದು ಅಥವಾ ವಿಕಲಾಂಗತೆಗೆ ಒಳಗಾಗಬಹುದು ಎಂಬ ಪರಿಸ್ಥಿತಿ ಇದ್ದಾಗ, ಗರ್ಭಪಾತ ಮಾಡಿಕೊಳ್ಳುವ ಹಕ್ಕು ತಾಯಿಯಾದವಳಿಗೆ ಇರುತ್ತದೆ. ಈ ಪ್ರಕರಣದಲ್ಲಿ ತಾಯಿಯು ಮಾನಸಿಕ ಅಸ್ವಸ್ಥೆ ಮಾತ್ರವಲ್ಲ, ಆಕೆಯ ಭ್ರೂಣವೂ ಕ್ಲಿನೆಫೆಲ್ಟರ್ ಸಿಂಡ್ರೋಮ್(ಗಂಡು ಮಗುವು ಹೆಚ್ಚುವರಿ ಎಕ್ಸ್ ಕ್ರೋಮೋಜೋನ್‌ನೊಂದಿಗೆ ಹುಟ್ಟುವಂಥ ಅಪರೂಪದ ಕಾಯಿಲೆ)ನಿಂದ ಬಳಲುತ್ತಿದೆ.
ಇದನ್ನೂ ಓದಿ:ನಥಿಂಗ್ ಇಯರ್ (1) ಎರಡೇ ನಿಮಿಷಕ್ಕೆ ಸೋಲ್ಡ್ ಔಟ್!
ಕ್ರೋಮೋಜೋಮ್‌ನಲ್ಲಾಗುವ ಈ ಅಸಾಮಾನ್ಯತೆಯಿಂದಾಗಿ ಮಗುವಿಗೆ ಬೆಳೆಯುತ್ತಿದ್ದಂತೆ ವಿವಿಧ ದೈಹಿಕ, ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಲ್ಲದೇ, ತಾಯಿಯ ಮಾನಸಿಕ ಆರೋಗ್ಯವೂ ಸರಿಯಿಲ್ಲದ ಕಾರಣ, ಆ ಮಗುವನ್ನು ಬೆಳೆಸಲು ಹಾಗೂ ನಿಯಂತ್ರಿಸಲು ಆಕೆಗೆ ಸಾಧ್ಯವಾಗದು ಎಂದು ವೈದ್ಯರು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಆ ಮಹಿಳೆಯ ಗರ್ಭಪಾತಕ್ಕೆ ಅನುಮತಿ ನೀಡಿದೆ.