ಕೊಚ್ಚಿ: ತೀವ್ರಗಾಮಿ ಧರ್ಮ ಬೋಧನೆ ಮಾಡುತ್ತಿದ್ದ ಕೊಚ್ಚಿಯ ಪೀಸ್ ಸ್ಕೂಲ್ ಅನ್ನು ಮುಚ್ಚುವಂತೆ ಕೇರಳ ಸರ್ಕಾರ ಆದೇಶಿಸಿದೆ. ಇತ್ತೀಚೆಗೆ ಸಿರಿಯಾಗೆ ತೆರಳಿ ಉಗ್ರ ಸಂಘಟನೆ ಐಸಿಸ್‌ಗೆ ಸೇರ್ಪಡೆಗೊಂಡ 21 ಜನರ ತಂಡಕ್ಕೆ ಪೀಸ್ ಶಾಲೆಯಲ್ಲಿ ಉದ್ಯೋಗಿಯಾಗಿದ್ದ ಅಬ್ದುಲ್ ರಶೀದ್
ಮುಖಂಡನಾಗಿದ್ದ ಎಂಬುದು ತೀವ್ರ ಚರ್ಚೆಗೀಡಾಗಿತ್ತು.
ಅಲ್ಲದೆ ಇದೇ ಶಾಲೆಯಲ್ಲಿ ಓದಿದ, ಅಬ್ದುಲ್ ರಶೀದ್‌ನ ಪತ್ನಿ ಯಾಸ್ಮಿನ್ ಅಹಮದ್ ಕೂಡ ತಂಡದಲ್ಲಿದ್ದಳು. ಶಾಲಾ ಪಠ್ಯಕ್ರಮದಲ್ಲಿ ಇಸ್ಲಾಂಗಾಗಿ ಪ್ರಾಣವನ್ನೂ ತೆರಲು ಸಿದ್ಧವಿರ ಬೇಕು ಎಂಬ ಪಠ್ಯ ಇದ್ದು, ಇದರ ವಿರುದ್ಧ ಈಗಾಗಲೇ ದೂರು ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ತಮ್ಮ ಪ್ರಚೋದನಕಾರಿ ಭಾಷಣದಿಂದ ಕೇರಳದ ಜಾಕಿರ್ ನಾಯಕ್ ಎಂದೇ ಕರೆಸಿಕೊಂಡಿರುವ ಹಾಗೂ ಈ ಶಾಲೆಯ ಮುಖ್ಯಸ್ಥರಾಗಿರುವ ಎಂ.ಎಂ ಅಕ್ಬರ್ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.