Advertisement

ಇಎಸ್‌ಝೆಡ್‌ ಸುತ್ತ ಜನವಸತಿ, ಕೃಷಿ, ಕಚೇರಿಗಳ ನಿಷೇಧ

11:01 PM Jul 27, 2022 | Team Udayavani |

ತಿರುವನಂತಪುರ: ಕೇರಳದಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳೆಂದು (ಇಎಸ್‌ಝೆಡ್‌) ಗುರುತಿಸಲಾಗಿರುವ ಪ್ರಾಂತ್ಯಗಳ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯಲ್ಲಿ ಜನ ವಸತಿ, ಕೃಷಿ ಭೂಮಿಗಳು ಇರಬಾರದೆಂದು ನಿಷೇಧಿಸಿ ಕೇರಳ ಸರ್ಕಾರ ನಿರ್ಧರಿಸಿದೆ.

Advertisement

ಜೊತೆಗೆ, ಈ ವಲಯದಲ್ಲಿರುವ ಸರ್ಕಾರಿ ಕಚೇರಿಗಳು, ಅರೆ- ಸರ್ಕಾರಿ ಕಚೇರಿಗಳು ಹಾಗೂ ಇನ್ನಿತರ ಸಾರ್ವಜನಿಕ ಸಂಸ್ಥೆಗಳನ್ನು ಸ್ಥಳಾಂತರಗೊಳಿಸುವಂತೆ ನಿರ್ಧರಿಸಲಾಗಿದೆ.

ಕೇರಳ ಅರಣ್ಯ ಇಲಾಖೆ ಈ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಬುಧವಾರ, ಮುಖ್ಯಮಂತ್ರಿ ಪಿಣರಾಯಿ ನೇತೃತ್ವದ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.

ಕೇಂದ್ರ ಸೆಡ್ಡು ಹೊಡೆಯಲು ಕ್ರಮ?
ಇತ್ತೀಚೆಗೆ, ಕೇಂದ್ರ ಸರ್ಕಾರ, ಕೇರಳದ 23 ವನ್ಯಜೀವಿ ಸಂರಕ್ಷಣಾ ತಾಣ ಹಾಗೂ ರಾಷ್ಟ್ರೀಯ ಉದ್ಯಾನಗಳ ಸುತ್ತಲಿನ ಪ್ರಾಂತ್ಯಗಳಲ್ಲಿ ಜನವಸತಿಗೆ ಅವಕಾಶ ಕಲ್ಪಿಸಿ, ಕರಡು ನಿಯಮಗಳನ್ನು ಜಾರಿಗೊಳಿಸಿತ್ತು. ಆ ಹಿನ್ನೆಲೆಯಲ್ಲಿ, ಕೇಂದ್ರಕ್ಕೆ ಸೆಡ್ಡು ಹೊಡೆಯಲು ಕೇರಳ ಸರ್ಕಾರ, ಇಎಸ್‌ಝೆಡ್‌ ಸುತ್ತ ಜನ ವಸತಿ, ಕೃಷಿಯನ್ನು ನಿಷೇಧಿಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಜೊತೆಗೆ, ಅರಣ್ಯ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೂ ಕಳುಹಿಸಲಾಗಿದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next