Advertisement

Kerala CM ತನ್ನ ಮೇಲೆ ದೈಹಿಕ ಹಲ್ಲೆಗೆ ಸಂಚು: ಕೇರಳ ರಾಜ್ಯಪಾಲ ಖಾನ್‌ ಆರೋಪ

11:28 PM Dec 11, 2023 | Shreeram Nayak |

ತಿರುವನಂತಪುರ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್‌ ಖಾನ್‌ ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಸಿಪಿಐ (ಎಂ)ನ ವಿದ್ಯಾರ್ಥಿ ಘಟಕವಾಗಿರುವ ಎಸ್‌ಎಫ್ಐಯ ಸದಸ್ಯ ಕಿಡಿಗೇಡಿಗಳು ಸೋಮ ವಾರ ದಾಳಿಗೆ ಪ್ರಯತ್ನಿಸಿದ ಘಟನೆ ಸಂಭವಿಸಿದೆ.

Advertisement

ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್‌ ತನ್ನ ಮೇಲೆ “ದೈಹಿಕ ಹಲ್ಲೆ’ ಎಸಗಲು ಸಂಚು ಹೂಡಿದ್ದಾರೆ ಎಂದು ರಾಜ್ಯಪಾಲ ಆರಿಫ್ ಮೊಹ ಮ್ಮದ್‌ ಖಾನ್‌ ಆರೋಪಿಸಿದ್ದು, ಕೇರಳ ಸರಕಾರ ಮತ್ತು ರಾಜ್ಯಪಾಲರ ನಡುವೆ ಹೊಸ ತಿಕ್ಕಾಟವೊಂದು ಆರಂಭಗೊಂಡಂತಾಗಿದೆ.

ಹೊಸದಿಲ್ಲಿಗೆ ಪ್ರಯಾಣಿಸುವುದಕ್ಕಾಗಿ ತಿರುವನಂತಪುರ ವಿಮಾನ ನಿಲ್ದಾಣದತ್ತ ರಾಜ್ಯಪಾಲರು ತೆರಳುತ್ತಿದ್ದಾಗ ಎಸ್‌ಎಫ್ಐಯ ಸದಸ್ಯರು ದಾಳಿ ನಡೆಸಲು ಮುಂದಾಗಿದ್ದರು. ಘಟನೆಯ ಬಳಿಕ ಕಾರಿನಿಂದ ಇಳಿದು ತೀವ್ರ ಆಕ್ರೋಶಭರಿತರಾಗಿ ಸುದ್ದಿಗಾರರಿಗೆ ಪ್ರತಿಕ್ರಿ ಯಿಸಿದ ರಾಜ್ಯಪಾಲರು ಮುಖ್ಯಮಂತ್ರಿ ಪಿಣರಾಯಿ ಮೇಲೆ ಹಲ್ಲೆ ಯ ಸಂಚಿನ ಆರೋಪ ಮಾಡಿದ್ದಾರೆ. ಕೇರಳದಲ್ಲಿ ಸಾಂವಿಧಾನಿಕ ಯಂತ್ರ ಕುಸಿದಂತೆ ಕಾಣಿಸುತ್ತಿದೆ ಎಂದೂ ರಾಜ್ಯಪಾಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next