Advertisement

Kerala government : ರಾಷ್ಟ್ರಪತಿ, ರಾಜ್ಯಪಾಲರ ವಿರುದ್ಧ ಸುಪ್ರೀಂ ಮೊರೆ ಹೋದ ಕೇರಳ

09:54 AM Mar 24, 2024 | Team Udayavani |

ಹೊಸದಿಲ್ಲಿ: ಕೇರಳ ವಿಧಾನಸಭೆಯಿಂದ ಅನುಮೋ ದನೆಗೊಂಡ 4 ಮಸೂದೆಗಳನ್ನು ಯಾವುದೇ ಕಾರಣ ನೀಡದೇ ರಾಷ್ಟ್ರಪತಿಗಳು ತಡೆಹಿಡಿದಿರುವುದಕ್ಕೆ ಹಾಗೂ 2 ವರ್ಷಗಳಿಂದ 7 ಮಸೂದೆಗಳನ್ನು ಕೇರಳ ರಾಜ್ಯಪಾಲರು ತಮ್ಮಲ್ಲೇ ಬಾಕಿ ಉಳಿಸಿಕೊಂಡು ಬಳಿಕ ರಾಷ್ಟ್ರಪತಿಗಳಿಗೆ ಕಳುಹಿಸಿರುವುದರ ವಿರುದ್ಧ ಕೇರಳ ಸರಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.

Advertisement

ರಾಷ್ಟ್ರಪತಿ ಕ್ರಮವು “ಅಸಾಂವಿಧಾನಿಕ ಮತ್ತು ವಿಶ್ವಾಸದ ಕೊರತೆ’ ಎಂದು ಘೋಷಿಸುವಂತೆ ಕೇರಳ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಈ ಸಂಬಂಧ ಸಂವಿಧಾನದ 32ನೇ ವಿಧಿಯಡಿ ಕೇರಳ ರಿಟ್‌ ಅರ್ಜಿ ಸಲ್ಲಿಸಿದೆ. ಇದರೊಂದಿಗೆ ಕೇಂದ್ರ ಮತ್ತು ಕೇರಳ ನಡುವೆ ಸಂಘರ್ಷ ಮತ್ತೂಂದು ಹಂತಕ್ಕೆ ತಲುಪಿದೆ.

ಆರೋಪಗಳೇನು?:

7 ಮಸೂದೆಗಳ 4 ಮಸೂದೆ ತಡೆಹಿಡಿದಿದ್ದಕ್ಕೆ ರಾಷ್ಟ್ರಪತಿ ಯಾವುದೇ ಕಾರಣ ನೀಡಿಲ್ಲ.

ಇದು ಸಂವಿಧಾನದ 14ನೇ ವಿಧಿ, 200ನೇ ವಿಧಿ ಮತ್ತು 201ನೇ ವಿಧಿಯ ಉಲ್ಲಂಘನೆ

Advertisement

ರಾಜ್ಯಪಾಲರು 2 ವರ್ಷಗಳಿಂದ ಮಸೂದೆಗಳನ್ನು ಬಾಕಿ ಇರಿಸಿಕೊಂಡಿದ್ದಾರೆ.

ಇದು ರಾಜ್ಯ ಶಾಸಕಾಂಗದ ಕಾರ್ಯ

ಚಟುವಟಿಕೆಗಳನ್ನು ಅಸ್ತವ್ಯಸ್ತಗೊಳಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next