Advertisement

ಐಎಎಸ್‌ ಅಧಿಕಾರಿ ವಿಚಾರಣೆ ; ಇಂದೂ ಮುಂದುವರಿಯಲಿದೆ ತನಿಖೆ

02:46 AM Jul 28, 2020 | Hari Prasad |

ತಿರುವನಂತಪುರ/ಕೊಚ್ಚಿ: ಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮಾಹಿತಿ ತಂತ್ರಜ್ಞಾನ ಖಾತೆ ಮಾಜಿ ಕಾರ್ಯದರ್ಶಿ ಎಂ.ಶಿವಶಂಕರ್‌ ಅವರನ್ನು ಎನ್‌ಐಎ ಸೋಮವಾರ 9 ಗಂಟೆ ವಿಚಾರಣೆ ನಡೆಸಿದೆ.

Advertisement

ಕೊಚ್ಚಿಯಲ್ಲಿರುವ ಎನ್‌ಐಎ ಕಚೇರಿಯಲ್ಲಿ ಕೊಚ್ಚಿ, ದಿಲ್ಲಿ ಮತ್ತು ಹೈದರಾಬಾದ್‌ನ ಅಧಿಕಾರಿಗಳ ತಂಡ ವಿಚಾರಣೆ ನಡೆಸಿತು.

ಬೆಳಗ್ಗೆ 9.30ಕ್ಕೆ ಶುರುವಾದ ವಿಚಾರಣೆ ರಾತ್ರಿ 7 ಗಂಟೆಗೆ ಮುಕ್ತಾಯವಾಗಿದೆ. ಮಂಗಳವಾರ ಕೂಡ ಅವರ ವಿಚಾರಣೆ ಮುಂದುವರಿಯಲಿದೆ.

56 ಪ್ರಶ್ನೆಗಳ ಪಟ್ಟಿಯನ್ನು ಅಧಿಕಾರಿಗಳ ತಂಡ ಶಿವಶಂಕರ್‌ ಮುಂದಿಟ್ಟಿತು. ವಿಚಾರಣೆ ಮುಕ್ತಾಯವಾದ ಬಳಿಕ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸದೆ ಕಾರಿನಲ್ಲಿ ಹೊರಟರು.

ಈ ಹಿಂದೆ ತಿರುವನಂತಪುರದಲ್ಲೇ ಎನ್‌ಐಎ ಶಿವಶಂಕರ್‌ರನ್ನು ವಿಚಾರಣೆಗೆ ಒಳಪಡಿಸಿತ್ತು. ಆಗ ಅವರು, ಪ್ರಕರಣದ ಆರೋಪಿಗಳಾದ ಸ್ವಪ್ನಾ ಸುರೇಶ್‌ ಮತ್ತು ಸರಿತ್‌ ತಮಗೆ ಪರಿಚಿತರಾಗಿದ್ದು, ಅವರೊಂದಿಗೆ ಸ್ನೇಹವಿತ್ತೇ ವಿನಾ ಚಿನ್ನದ ಕಳ್ಳ ಸಾಗಣೆಗೂ ತಮಗೂ ಸಂಬಂಧವಿಲ್ಲ ಎಂದಿದ್ದರು.

Advertisement

ಆದರೆ ಈ ವಿಚಾರದಲ್ಲಿ ಶಿವಶಂಕರ್‌ ನೀಡಿರುವ ಕೆಲವೊಂದು ಹೇಳಿಕೆಗಳು ವ್ಯತಿರಿಕ್ತವಾಗಿರುವ ಕಾರಣ, ಈ ಬಗ್ಗೆ ಸ್ಪಷ್ಟನೆ ಕೇಳಬೇಕಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಸೆಷನ್ಸ್‌ ಕೋರ್ಟ್‌ಗೆ ವರದಿ: ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಫೈಸಲ್‌ ಫ‌ರೀದ್‌ ಮತ್ತು ರಿಬಿನ್ಸನ್‌ ಎಂಬಿಬ್ಬರನ್ನು 17 ಮತ್ತು 18ನೇ ಆರೋಪಿಗಳು ಎಂದು ಕಸ್ಟಮ್ಸ್‌ ಇಲಾಖೆ ಹೆಸರಿಸಿದ್ದು, ಎರ್ನಾಕುಳಂ ಸೆಷನ್ಸ್‌ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ಅಲ್ಲದೆ, ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ಇಬ್ಬರು ಆರೋಪಿಗಳು ದುಬಾೖಯಿಂದ ಕೇರಳಕ್ಕೆ ಸರಿಸುಮಾರು 1 ಕೋಟಿ ರೂ. ಮೌಲ್ಯದ ಬಂಗಾರವನ್ನು ಕಳ್ಳಸಾಗಣೆ ಮಾಡಿದ್ದಾರೆ. ಬರೋಬ್ಬರಿ 23 ಬಾರಿ ರಾಜತಾಂತ್ರಿಕ ಬ್ಯಾಗೇಜ್‌ ಮೂಲಕ ಸ್ಮಗ್ಲಿಂಗ್‌ ಮಾಡಲಾಗಿದೆ ಎಂಬ ಮಾಹಿತಿಯನ್ನೂ ಇಲಾಖೆ ಬಹಿರಂಗಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next