ತಿರುವನಂತಪುರ: ಕೇರಳದಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದೆ. ಪ್ರವಾಹ ಸಂಬಂಧಿಸಿದ ದುರಂತದಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವಿಗೀಡಾಗಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರ(ಎಸ್‌ಡಿಎಂಎ)ವು 9 ಜಿಲ್ಲೆಗಳಿಗೆ ಅ.15ರ ವರೆಗೆ ಎಲ್ಲೋ ಅಲರ್ಟ್ ಮತ್ತು ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.
ಮಲಪ್ಪುರಂ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಕರಿಪುರದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದಿದ್ದು, ಅದರ ಪಕ್ಕದ ಮನೆಯಲ್ಲಿದ್ದ 8 ವರ್ಷದ ಬಾಲಕಿ ಹಾಗೂ 7 ತಿಂಗಳ ಮಗು ಸಾವನ್ನಪ್ಪಿದೆೆ. ಮಳೆ, ಪ್ರವಾಹದಿಂದಾಗಿ ನದಿಗಳ ನೀರಿನ ಪ್ರಮಾಣ ಹೆಚ್ಚುತ್ತಿದೆ.
ಇದನ್ನೂ ಓದಿ:ಕಲಬುರಗಿ: ಸಿದ್ದರಾಮಯ್ಯ ಮಾತನಾಡುತ್ತಿರುವಾಗಲೇ ಕಂಪಿಸಿದ ಭೂಮಿ
ಕಾಸರಗೋಡು, ತ್ರಿಶ್ಶೂರ್ ಸೇರಿದಂತೆ 9 ಜಿಲ್ಲೆಗಳಲ್ಲಿ ಬುಧವಾರವೂ ಧಾರಾಕಾರ ಮಳೆಯಾಗುವ ಎಚ್ಚರಿಕೆಯನ್ನು ಐಎಂಡಿ ನೀಡಿದೆ. ವಿಪತ್ತು ಸಂಭವಿಸುವ ಸಾಧ್ಯತೆಯಿರುವ ಪ್ರದೇಶದಲ್ಲಿ ಜನರು ತುರ್ತು ಕಿಟ್ ಸಿದ್ಧವಾಗಿಟ್ಟುಕೊಳ್ಳಿ. ನೀರಿರುವ ಪ್ರದೇಶಕ್ಕೆ ತೆರಳುವುದು, ಗುಂಪು ಸೇರುವುದನ್ನು ಕಡಿಮೆ ಮಾಡಿ ಎಂದು ಎಚ್ಚರಿಸಲಾಗಿದೆ.