ದೇವರ ಸ್ವಂತ ನಾಡು ಎಂದೇ ಪ್ರಸಿದ್ಧವಾದ ಕೇರಳದಲ್ಲಿ ನೇಂದ್ರ ಬಾಳೆ ಹಣ್ಣಿನಿಂದ ರುಚಿರುಚಿಯಾದ ತಿಂಡಿ ತಿನಸುಗಳನ್ನು ತಯಾರಿಸಲಾಗುತ್ತದೆ. ಅವುಗಳಲ್ಲಿ ಉನ್ನಕಾಯ ಒಂದು.
ಬೇಕಾಗುವ ಸಾಮಗ್ರಿಗಳು
– ನೇಂದ್ರ ಬಾಳೆ ಹಣ್ಣು -2
– ಒಣದ್ರಾಕ್ಷಿ -10ರಿಂದ 12
– ಏಲಕ್ಕಿ ಸ್ವಲ್ಪ
– ತೆಂಗಿನ ತುರಿ -1 ಕಪ್
– ಸಕ್ಕರೆ -2 ಚಮಚ
– ತೆಂಗಿನ ಎಣ್ಣೆ -1 ಕಪ್
ತಯಾರಿಸುವ ವಿಧಾನ: ಬಾಳೆ ಹಣ್ಣನ್ನ ಕುಕ್ಕರ್‌ನಲ್ಲಿ ಬೇಯಿಸಿ. ಬಾಣಲೆ ಬಿಸಿ ಮಾಡಿ ಅದಕ್ಕೆ ಸಕ್ಕರೆ ಮತ್ತು ಅದು ಮುಳುಗವಷ್ಟು ನೀರು ಹಾಕಿ ಸಕ್ಕರೆ ಪಾಕ ತಯಾರಿಸಿ. ಅದಕ್ಕೆ ಕಾಯಿತುರಿ, ಒಣದ್ರಾಕ್ಷಿ, ಏಲಕ್ಕಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಹೂರಣ ಸಿದ್ಧ ಪಡಿಸಿ. ಬೇಯಿಸಿದ ಬಾಳೆಹಣ್ಣನ್ನು ತೆಗೆದು ಚೆನ್ನಾಗಿ ಹಿಚುಕಿ ಪೇಸ್ಟ್ ಮಾಡಿ ಸಾಧಾರಣ ಗಾತ್ರದ ಉಂಡೆ ತಯಾರಿಸಿ. ಒಂದೊಂದೇ ಉಂಡೆ ಅಂಗೈಯಲ್ಲಿ ಇಟ್ಟು ತಟ್ಟಿ. ಸ್ವಲ್ಪ ಹೂರಣ ತೆಗೆದು ತಟ್ಟಿದ ಹಣ್ಣಿನ ಪೇಸ್ಟ್ ಮೇಲಿಟ್ಟು ರೋಲ್ ಮಾಡಿ. ಬಾಣಲೆಗೆ ಎಣ್ಣೆ ಹಾಕಿ, ಎಣ್ಣೆ ಕಾದಾಗ ರೋಲ್‌ಗಳನ್ನು ಅದಕ್ಕೆ ಹಾಕಿ ಕಂದು ಬಣ್ಣಕ್ಕೆ ಬರುವವರೆಗೆ ಕರಿದು ತೆಗೆಯಿರಿ.
– ಗಣೇಶ ಕುಳಮರ್ವ