Advertisement

ಕೇರಳ: ಐವರಲ್ಲಿ ಸೋಂಕು ದೃಢ; ಹೊರ ರಾಜ್ಯದಿಂದ ಬಂದವರದ್ದೇ ಭೀತಿ

08:30 AM May 13, 2020 | mahesh |

ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ ಕೋವಿಡ್ ಸೋಂಕು ಪ್ರಕರಣ ದಾಖಲಾಗಿಲ್ಲ. ಆದರೆ ಇದೇ ವೇಳೆ ಕೇರಳ ರಾಜ್ಯದಲ್ಲಿ ಮತ್ತೆ ಐವರಲ್ಲಿ ಸೋಂಕು ದೃಢವಾಗಿದೆ. ಮಲಪ್ಪುರಂ ಜಿಲ್ಲೆಯ ಮೂವರಿಗೆ, ಪತ್ತನಂತಿಟ್ಟ ಮತ್ತು ಕೋಟ್ಟಯಂನಲ್ಲಿ ತಲಾ ಒಬ್ಬರಿಗೆ ರೋಗ ಬಾಧಿಸಿದೆ. ಅವರಲ್ಲಿ ನಾಲ್ವರು ವಿದೇಶದಿಂದ, ಒಬ್ಬರು ಚೆನ್ನೈಯಿಂದ ಬಂದವರು.

Advertisement

ರಾಜ್ಯದಲ್ಲಿ ಒಟ್ಟು 32 ಮಂದಿ ಕೋವಿಡ್ ಬಾಧಿತರು ಚಿಕಿತ್ಸೆ ಪಡೆಯುತ್ತಿದ್ದು, ಅವರ ಪೈಕಿ 23 ಮಂದಿಯೂ ಕೇರಳಕ್ಕೆ ಹೊರಗಿನಿಂದ ಬಂದವರು. ಚೆನ್ನೈಯಿಂದ 6, ಮಹಾರಾಷ್ಟ್ರದಿಂದ 4, ನಿಜಾಮು ದ್ದೀನ್‌ನಿಂದ 2 ಮತ್ತು ವಿದೇಶಗಳಿಂದ ಆಗಮಿಸಿದ 11 ಮಂದಿಯನ್ನು ಸೋಂಕು ಬಾಧಿಸಿದೆ. ಸಂಪರ್ಕದಿಂದ 9 ಮಂದಿಗೆ ರೋಗ ಬಾಧಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.

ನಾಲ್ವರಿಗೆ ಚಿಕಿತ್ಸೆ
ಜಿಲ್ಲೆಯಲ್ಲಿ ಒಟ್ಟು 183 ಮಂದಿಗೆ ಕೋವಿಡ್ ವೈರಸ್‌ ಸೋಂಕು ಬಾಧಿಸಿದ್ದು, ಈ ಪೈಕಿ 179 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ.

7 ಪ್ರಕರಣ ದಾಖಲು
ಲಾಕ್‌ಡೌನ್‌ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ 7 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 19 ಮಂದಿಯನ್ನು ಬಂಧಿಸಲಾಗಿದೆ. ವಾಹನವೊಂದನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next