ನವ ದೆಹಲಿ: ಕೇರಳದಿಂದ ದುಬೈಗೆ ವಿಮಾನ ಸಂಚಾರ ಜುಲೈ 7ರಿಂದ ಆರಂಭವಾಗಲಿದೆ. ಕೊರೊನಾ 2ನೇ ಅಲೆಯ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ವೈಮಾನಿಕ ಸೇವೆಗಳನ್ನು ಪುನಾರಂಭಿಸುವುದಾಗಿ ಫ್ಲೈ ದುಬೈ ಮತ್ತು ಎಮಿರೇಟ್ಸ್ ಏರ್ ಲೈನ್ಸ್ ಗಳು ಹೇಳಿವೆ.
ಸೇವೆಗಳ ಪುನಾರಂಭಕ್ಕೆ ಸಂಬಂಧಿಸಿ ನಾಗರಿಕ ವಿಮಾನಯಾನ ಪ್ರಾಧಿಕಾರದಿಂದ ಗುರುವಾರ ಸಂಜೆಯೇ ಒಪ್ಪಿಗೆ ದೊರೆತಿದೆ.
ಅದರಂತೆ, ಜುಲೈ 7ರಿಂದ ಕೇರಳದಿಂದ ದುಬೈಗೆ, ಜುಲೈ 3ರಿಂದ ಹೈದರಾಬಾದ್ ನಿಂದ ದುಬೈಗೆ ವಿಮಾನಗಳು ಸಂಚರಿಸಲಿವೆ. ಇನ್ನೊಂದೆಡೆ, ಏರ್ ಇಂಡಿಯಾ ಕಂಪನಿಯು ಜು.6ರವರೆಗೆ ವಿಮಾನ ಸಂಚಾರ ಆರಂಭಿಸುವುದಿಲ್ಲ ಎಂದು ಈಗಾಗಲೇ ಹೇಳಿದೆ.
ಕೊರೊನಾ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದವರಷ್ಟೇ ಗಲ್ಫ್ ರಾಷ್ಟ್ರಕ್ಕೆ ಪ್ರಯಾಣಿಸಬಹುದು ಎಂದು ಯುಎಇ ಷರತ್ತು ಹಾಕಿದೆ.
ಇದನ್ನೂ ಓದಿ :ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 226 ಅಂಕ ಏರಿಕೆ, 15,850ರ ಗಡಿ ದಾಟಿದ ನಿಫ್ಟಿ
ಜತೆಗೆ, ಚೀನಾದ ಸೈನೋ ಫಾರ್ಮ್, ಫೈಜರ್-ಬಯಾನ್ ಟೆಕ್, ರಷ್ಯಾದ ಸ್ಪುಟ್ನಿಕ್ ವಿ, ಆಕ್ಸ್ ಫರ್ಡ್-ಆಸ್ಟ್ರಾ ಜೆನೆಕಾದ ಕೊವಿಶೀಲ್ಡ್ ಲಸಿಕೆ ಪಡೆದವರಿಗಷ್ಟೇ ದುಬೈ ಪ್ರವೇಶಕ್ಕೆ ಅವಕಾಶವಿರುತ್ತದೆ ಎಂದೂ ಯುಎಇ ಸರ್ಕಾರ ಹೇಳಿದೆ.