ಕಲ್ಲಿಕೋಟೆ: ಕೇರಳದ ವಯನಾಡ್‌ನಿಂದ ಲೋಕಸಭೆ ಸದಸ್ಯರನ್ನಾಗಿ ರಾಹುಲ್ ಗಾಂಧಿ ಅವರನ್ನು ಆಯ್ಕೆ ಮಾಡಿ ಜನರು ಅತಿ ದೊಡ್ಡ ತಪ್ಪು ಮಾಡಿದ್ದಾರೆ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿದ್ದಾರೆ.
ನಿರಂತರ ವಾಗಿ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ದುಡಿಯುತ್ತಿರುವ ಮತ್ತು ಸ್ವಯಂ ವ್ಯಕ್ತಿತ್ವ ರೂಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಎದುರು ರಾಹುಲ್‌ಗೆ ಅವಕಾಶವೇ ಇಲ್ಲವೆಂದಿದ್ದಾರೆ.
ಕಲ್ಲಿಕೋಟೆ ಸಾಹಿತ್ಯ ಉತ್ಸವ ದಲ್ಲಿ ಶುಕ್ರವಾರ ಮಾತನಾಡಿದ ಅವರು, “ಐದನೇ ತಲೆಮಾರಿನ ರಾಹುಲ್ ಗಾಂಧಿಯವರಿಗೆ ನರೇಂದ್ರ ಮೋದಿಯವರ ಎದುರು ಅವಕಾಶವೇ ಇಲ್ಲ. ಸ್ವಾತಂತ್ರ್ಯ ಹೋರಾಟದ ವೇಳೆ ಕಾಂಗ್ರೆಸ್ ಅತ್ಯುತ್ತಮವಾಗಿತ್ತು. ಈಗ ಅದು ಕುಟುಂಬವೊಂದು ನಡೆಸುವ ಸಂಸ್ಥೆಯಾಗಿದೆ.
ರಾಹುಲ್ ವಿರುದ್ಧ ನನಗೆ ವೈಯಕ್ತಿಕ ದ್ವೇಷವೇನೂ ಇಲ್ಲ. ಅವರೊಬ್ಬ ಉತ್ತಮ ವ್ಯಕ್ತಿ. ದೇಶದ ಯುವ ಜನತೆ ಐದನೇ ತಲೆಮಾರಿನ ನಾಯಕನನ್ನು ಬಯ ಸುವುದಿಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಮಲಯಾಳಿ ಗರು ಮತ್ತೆ ಅವರನ್ನು ಆಯ್ಕೆ ಮಾಡಿದರೆ ನರೇಂದ್ರ ಮೋದಿಯ ವರಿಗೆ ಮತ್ತೆ ಅವಕಾಶ ನೀಡಿದಂತೆ ಆಗುತ್ತದೆ’ ಎಂದು ಹೇಳಿದ್ದಾರೆ.
ಮೋದಿಯವರಿಗೆ 15 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಅನುಭವ ಇದೆ. ಅವರು ಐರೋಪ್ಯ ದೇಶಗಳಿಗೆ ಒಂದು ದಿನ ಕೂಡ ರಜೆಯಲ್ಲಿ ತೆರಳಿದ್ದೇ ಇಲ್ಲ. ಈ ಎಲ್ಲ ಅಂಶಗಳನ್ನು ಗಂಭೀರವಾಗಿಯೇ ಮಂಡಿಸುತ್ತಿರುವುದಾಗಿ ಗುಹಾ ಹೇಳಿದ್ದಾರೆ.