Advertisement

ಕೇರಳದಲ್ಲಿ ಕಡಿಮೆಯಾಗದ ಸೋಂಕು

11:56 PM Aug 31, 2021 | Team Udayavani |

ಹೊಸದಿಲ್ಲಿ/ತಿರುವನಂತಪುರ: ಸೋಮವಾರ ಕೇರಳದಲ್ಲಿ ಇಳಿಕೆಯ ಹಾದಿ ಕಂಡಿದ್ದ ಸೋಂಕು ಸಂಖ್ಯೆ ಮಂಗಳವಾರ ಗಗನಮುಖಿಯಾಗಿದೆ.

Advertisement

ಒಂದೇ ದಿನ 30, 203 ಹೊಸ ಕೇಸುಗಳು ದೃಢಪಟ್ಟಿವೆ ಮತ್ತು 115 ಮಂದಿ ಅಸುನೀಗಿದ್ದಾರೆ. ಸೋಂಕು ಪಾಸಿಟಿವಿಟಿ ಪ್ರಮಾಣ (ಟಿಪಿಆರ್‌) ಶೇ.18.86ಕ್ಕೆ ಏರಿಕೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ 1,60,152 ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದೆ.

ಮತ್ತೂಂದು ಬೆಳವಣಿಗೆಯಲ್ಲಿ ಮಲಪ್ಪುರಂನ ಮಂಜೇರಿ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೆಲಸ ಮಾಡುವ ಡಾ| ಅಬ್ದುಲ್‌ ಗಫ‌ೂರ್‌ (34) ಅವರಿಗೆ ನಾಲ್ಕು ಬಾರಿ ಸೋಂಕು ದೃಢಪಟ್ಟಿದೆ. 2 ಬಾರಿ ಲಸಿಕೆಯನ್ನೂ ಪಡೆದುಕೊಂಡಿದ್ದಾರೆ. ಕಳೆದ ವರ್ಷದ ಮೇಯಲ್ಲಿ ಅವರಿಗೆ ಮೊದಲ ಬಾರಿಗೆ ಸೋಂಕು ಪತ್ತೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next