ಪಾಲಕ್ಕಾಡ್ : ಮಹಿಳೆಯೊಬ್ಬರು ಸ್ನಾನ ಮಾಡುತ್ತಿದ್ದ ವೇಳೆ ಮೊಬೈಲ್ ಫೋನ್ ಬಳಸಿ ಚಿತ್ರೀಕರಿಸಲು ಯತ್ನಿಸಿದ ಆರೋಪದಲ್ಲಿ ಸಿಪಿಎಂನ ಮಾಜಿ ಶಾಖೆಯ ಕಾರ್ಯದರ್ಶಿಯೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಕೊಡುಂಬು ಅಂಬಲಪರಂಬದ ಸಿಪಿಎಂ ಮಾಜಿ ಶಾಖೆಯ ಕಾರ್ಯದರ್ಶಿ ಶಾಜಹಾನ್ ಎಂದು ಗುರುತಿಸಲಾಗಿದೆ. ತಮಿಳುನಾಡಿನಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ನಂತರ ಶಾಜಹಾನ್ ಪರಾರಿಯಾಗಿದ್ದ.
ಸಿಪಿಎಂ ತನ್ನ ಮುಖವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ,ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಿದ ನಂತರ ಶಾಜಹಾನ್ ನನ್ನ ಪದಚ್ಯುತಗೊಳಿಸಿತ್ತು. ಬಾತ್ ರೂಂ ದೃಶ್ಯಗಳನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಲು ಯತ್ನಿಸಿದ್ದಾನೆ ಎಂದು ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪಾಲಕ್ಕಾಡ್ ದಕ್ಷಿಣ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಮಹಿಳೆಯ ಮನೆಯವರು ಅವರ ಮನೆಯ ಆವರಣದಿಂದ ಫೋನ್ ಅನ್ನು ವಶಪಡಿಸಿಕೊಂಡಿದ್ದು. ಸಾಕ್ಷ್ಯವಾಗಿ ಮೊಬೈಲ್ ಸಮೇತ ದೂರು ಸಲ್ಲಿಸಲಾಗಿದೆ.
ಪ್ರಕರಣಕ್ಕೆ ಕಾರಣವಾದ ಘಟನೆ ಜೂನ್ 11 ರಂದು ನಡೆದಿದ್ದು, ಮಹಿಳೆ ಬಾತ್ರೂಮ್ ನ ವೆಂಟಿಲೇಟರ್ ಮೂಲಕ ಕೈ ಚಾಚಿರುವುದನ್ನು ನೋಡಿ ಕಿರುಚಿದ ನಂತರ ಆ ವ್ಯಕ್ತಿ ಓಡಿಹೋದನು. ಬಳಿಕ ಆಕೆಯ ಮನೆಯ ಆವರಣದಿಂದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.