Advertisement

ಕೇರಳದಲ್ಲಿ ಸಿನಿ ಥಿಯೇಟರ್‌ಗಳತ್ತ ಜನರ ಸೆಳೆಯಲು ಹೊಸ ತಂತ್ರ

08:49 AM Jun 30, 2021 | Team Udayavani |

ತಿರುವನಂತಪುರಂ: ಕೊರೊನಾ ಹಾಗೂ ಲಾಕ್‌ಡೌನ್‌ನಿಂದಾಗಿ ಮನೆಗಳಿಗೇ ಸೀಮಿತವಾಗಿರುವ ಜನರನ್ನು ಮತ್ತೆ ಥಿಯೇಟರ್‌ಗಳತ್ತ ಸೆಳೆಯಲು ಮಲಯಾಳಂ ಫಿಲಂ ಇಂಡಸ್ಟ್ರಿ ಮುಂದಾಗಿದೆ. ಅದರಂತೆ, ಖ್ಯಾತ ನಟ ಮೋಹನ್‌ ಲಾಲ್‌ ಅಭಿನಯದ ಬಿಗ್‌ ಬಜೆಟ್‌ ಸಿನಿಮಾ “ಮರಕ್ಕರ್‌-ಅರಬ್ಬೀಕಡಲಿಂಡೆ ಸಿಂಹಂ’ ಅನ್ನು 3 ವಾರ ಕಾಲ ಥಿಯೇಟರ್‌ ಗಳಲ್ಲಿ ಓಡಿಸಲು ನಿರ್ಧರಿಸಲಾಗಿದೆ.

Advertisement

ಈ ಅವಧಿಯಲ್ಲಿ ಬೇರೆ ಯಾವ ಚಿತ್ರವನ್ನೂ ಬಿಡುಗಡೆ ಮಾಡದಿರಲು ತೀರ್ಮಾನಿಸಲಾಗಿದ್ದು, ಇದಕ್ಕೆ ಕೇರಳದ ಸಿನಿಮಾ ಪ್ರದರ್ಶಕರ ಸಂಯುಕ್ತ ಒಕ್ಕೂಟವೂ ಬೆಂಬಲ ನೀಡಿದೆ.

ರಾಜ್ಯದಲ್ಲಿನ ಒಟ್ಟಾರೆ 650 ಸ್ಕ್ರೀನ್‌ಗಳ ಪೈಕಿ 350 ಅನ್ನು ಈ ಒಕ್ಕೂಟ ಒಳಗೊಂಡಿದೆ. ವರ್ಷದ ನಂತರ ಥಿಯೇಟರ್‌ ತೆರೆಯುತ್ತಿರುವ ಕಾರಣ, ಸ್ಟಾರ್‌ ವ್ಯಾಲ್ಯೂ ಇರುವ ದೊಡ್ಡ ಸಿನಿಮಾದ ಅವಶ್ಯಕತೆ ನಮಗಿದೆ. ಇದಕ್ಕಾಗಿ ಪ್ರಿಯದರ್ಶನ್‌ ನಿರ್ದೇಶನದ ಕೇರಳದ ಮೊದಲ 100 ಕೋಟಿ ಬಜೆಟ್‌ನ ಸಿನಿಮಾವನ್ನು ಎಲ್ಲ ಸ್ಕ್ರೀನ್‌ಗಳಲ್ಲೂ ಏಕಕಾಲಕ್ಕೆ ಪ್ರದರ್ಶಿಸುವ ಮೂಲಕ ಹೆಚ್ಚಿನ ಜನರನ್ನು ಥಿಯೇಟರ್‌ಗಳತ್ತ ಸೆಳೆಯುವುದು ನಮ್ಮ ಉದ್ದೇಶ ಎಂದು ಒಕ್ಕೂಟ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next