Advertisement

ಮಂಡನೆಗೂ ಮುನ್ನ ಕೇರಳ ಬಜೆಟ್ ಫೇಸ್ ಬುಕ್ ನಲ್ಲಿ ಸೋರಿಕೆ!ವಿಪಕ್ಷ ಟೀಕೆ

03:43 PM Mar 03, 2017 | Team Udayavani |

ತಿರುವನಂತಪುರಂ: ಬಿಜೆಪಿ ಎಂಎಲ್ ಸಿ ಲೆಹರ್ ಸಿಂಗ್ ಡೈರಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದೆ ಎಂದು ಕಾಂಗ್ರೆಸ್ ಆರೋಪಿಸುವ ಮೂಲಕ ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಜಟಾಪಟಿಗೆ ಇಳಿದಿದ್ದರು. ಏತನ್ಮಧ್ಯೆ ನೆರೆಯ ಕೇರಳ ರಾಜ್ಯದಲ್ಲಿ ರಾಜ್ಯ ಬಜೆಟ್ ಮಂಡನೆಗೂ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಆಗಿದೆ ಎಂದು ಆರೋಪಿಸಿ ವಿಪಕ್ಷಗಳು ಶುಕ್ರವಾರ ಕೇರಳ ವಿಧಾನಸಭೆ ಕಲಾಪ ಬಹಿಷ್ಕರಿಸಿ ಹೊರನಡೆದ ಘಟನೆ ನಡೆದಿದೆ.

Advertisement

ಕೇರಳ ವಿಧಾನಸಭೆಯಲ್ಲಿ ಹಣಕಾಸು ಸಚಿವ ಥಾಮಸ್ ಐಸಾಕ್ ಬಜೆಟ್ ಅನ್ನು ಮಂಡಿಸುವ ಮುನ್ನವೇ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಬಜೆಟ್ ವಿವರವನ್ನು ನೀಡಿವೆ! ಹಣಕಾಸು ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಸಚಿವರ ಸಚಿವಾಲಯದಿಂದಲೇ ಬಜೆಟ್ ಸೋರಿಕೆಯಾಗಿದೆ. ಹಾಗಾಗಿ ಅವರು ಬಜೆಟ್ ಮಂಡಿಸುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ ಎಂದು ಆರೋಪಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next