Advertisement

ಬಾಲಕಿಯರಿಗೆ ಕಿರುಕುಳ: ಕೇರಳದ ಚಿತ್ರನಟ ಶ್ರೀಜಿತ್ ರವಿ ಬಂಧನ

03:00 PM Jul 07, 2022 | Team Udayavani |

ತಿರುವನಂತಪುರಂ: ಕೇರಳದ ಪಾಲಕ್ಕಾಡ್‌ ನಲ್ಲಿ ಇಬ್ಬರು ಶಾಲಾ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ನಟ ಶ್ರೀಜಿತ್ ರವಿ ಅವರನ್ನು ಬಂಧಿಸಲಾಗಿದೆ.

Advertisement

46 ವರ್ಷದ ಶ್ರೀಜಿತ್ ರವಿ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಈ ಘಟನೆ ಕಳೆದ ಸೋಮವಾರ ನಡೆದಿದೆ ಎಂದು ವರದಿಯಾಗಿದೆ. ಪಾಲಕ್ಕಾಡ್ ನಲ್ಲಿ ಕಾರಿನಿಂದಿಳಿದ ನಟ ಶ್ರೀಜಿತ್ ಇಬ್ಬರು ವಿದ್ಯಾರ್ಥಿನಿಯರ ಎದುರು ಅಶ್ಲೀಲವಾಗಿ ನಡೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ವೈದ್ಯೆ ಗುರುಪ್ರೀತ್ ಕೌರ್ “ಕೈ” ಹಿಡಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್

ಶ್ರೀಜಿತ್ ರವಿ ಈ ಹಿಂದೆಯೂ ಇದೇ ರೀತಿಯ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದರು. 2016ರಲ್ಲಿ ಪಾಲಕ್ಕಾಡ್ ನಲ್ಲಿ 14 ಮಂದಿ ಶಾಲೆ ವಿದ್ಯಾರ್ಥಿನಿಯರ ಎದುರು ತನ್ನ ಖಾಸಗಿ ಅಂಗವನ್ನು ತೋರಿಸಿದ್ದ. ಈ ಪ್ರಕರಣದಲ್ಲಿ ಬಂಧಿತನಾಗಿದ್ದ ಶ್ರೀಜಿತ್ ರವಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next